ರುಚಿ ರುಚಿ ಕರ್ಜೂರ ಆರೋಗ್ಯಕ್ಕೂ ಒಳ್ಳೆಯದು. ಪ್ರತಿದಿನ ಕರ್ಜೂರ ತಿನ್ನುವುದರಿಂದ ಸಾಕಷ್ಟು ಲಾಭಗಳಿವೆ. ಮಿನರಲ್, ಫೈಬರ್, ವಿಟಮಿನ್ ಇದ್ರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಕೇವಲ ಮೂರು ಖರ್ಜೂರ ತಿನ್ನುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶ ನಮ್ಮ ದೇಹ ಸೇರುತ್ತದೆ.
ಒಂದು ಕರ್ಜೂರದಲ್ಲಿ ಪೋಟ್ಯಾಶಿಯಂ (696 ಮಿ.ಗ್ರಾಂ), ಮೆಗ್ನೀಷಿಯಂ (54 ಮಿ.ಗ್ರಾಂ), ವಿಟಮಿನ್ ಬಿ ( 6-0.2 ಮಿ.ಗ್ರಾ), ಫೈಬರ್ (6.7 ಮಿ.ಗ್ರಾಂ), ಮ್ಯಾಂಗನೀಸ್ (0.3 ಮಿ.ಗ್ರಾಂ), ತಾಮ್ರ (0.4 ಮಿ.ಗ್ರಾಂ) ಇರುತ್ತದೆ. ಇದು ನೈಸರ್ಗಿಕವಾಗಿ ಸಿಹಿಯಂಶ ಹೊಂದಿರುವುದರಿಂದ ಖರ್ಜೂರ ತಿಂದ ನಂತ್ರ ಸಕ್ಕರೆ ತಿನ್ನದಿರುವುದು ಒಳ್ಳೆಯದು.
ಸತತ ಒಂದು ವಾರಗಳ ಕಾಲ ಪ್ರತಿದಿನ ಮೂರು ಖರ್ಜೂರ ತಿನ್ನುವುದರಿಂದ ಮೂಳೆಗಳು ಬಲ ಪಡೆಯುತ್ತವೆ. ನೈಸರ್ಗಿಕವಾಗಿರುವ ಸಕ್ಕರೆ ದೇಹಕ್ಕೆ ಶಕ್ತಿ ನೀಡುತ್ತದೆ. ಫೈಬರ್ ಅಂಶವಿರುವುದರಿಂದ ದಿನವಿಡಿ ಉತ್ಸಾಹದಿಂದಿರಲು ನೆರವಾಗುತ್ತದೆ.
ಕರ್ಜೂರ ಜೀರ್ಣ ಕ್ರಿಯೆಯನ್ನು ಸುಲಭಗೊಳಿಸುತ್ತದೆ. ನಿಯಮಿತವಾಗಿ ಇದನ್ನು ತಿನ್ನುವುದರಿಂದ ಅಜೀರ್ಣ ಕಾಡುವುದಿಲ್ಲ. ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಕಾಡುವುದಿಲ್ಲ.
ಕಬ್ಬಿಣದ ಅಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಹಿಮೋಗ್ಲೋಬಿನ್ ಮಟ್ಟ ಹೆಚ್ಚಾಗುತ್ತದೆ. ಮಹಿಳೆ ಹಾಗೂ ಮಕ್ಕಳಿಗೆ ಸಾಮಾನ್ಯವಾಗಿ ಕಾಡುವ ರಕ್ತಹೀನತೆ ಸಮಸ್ಯೆ ಹತ್ತಿರವೂ ಸುಳಿಯುವುದಿಲ್ಲ.