ಚಿಕನ್ ಪ್ರಿಯರಿಗೊಂದು ಖುಷಿ ಸುದ್ದಿ ಬಂದಿದೆ. ಚಿಕನ್ ತಿಂದರೆ ಸಾಕಷ್ಟು ಪ್ರೊಟೀನ್ ಸಿಕ್ಕಿ ನಿಮ್ಮ ದೇಹದ ಸ್ನಾಯುಗಳು ಗಟ್ಟಿಮುಟ್ಟಾಗುತ್ತವಂತೆ.
ಅದರಲ್ಲೂ ನಾಟಿ ಕೋಳಿ ತಿಂದರೆ ನಿಮ್ಮ ಆರೋಗ್ಯ ಸುಧಾರಿಸಲಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಕೋಳಿ ಮಾಂಸ ತಿಂದರೆ ಮೂಳೆಗಳೂ ಗಟ್ಟಿಮುಟ್ಟಾಗುತ್ತವೆ ಮತ್ತು ಸಂಧಿವಾತದಂತಹ ರೋಗಗಳೂ ಹತ್ತಿರ ಸುಳಿಯುವುದಿಲ್ಲ. ಇದಕ್ಕೆ ಪ್ರಮುಖ ಕಾರಣ ಕೋಳಿಮಾಂಸದಲ್ಲಿರುವ ಕ್ಯಾಲ್ಸಿಯಂ ಮತ್ತು ಗಂಧಕದ ಅಂಶಗಳು.
ಇದರಲ್ಲಿನ ವಿಟಮಿನ್ ಬಿ5 ಮತ್ತು ಟ್ರಿಪ್ಟೋಫ್ಯಾನ್ ನಂತಹ ಪೋಷಕಾಂಶಗಳು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತವೆ. ಶೀತ, ಕೆಮ್ಮಿನಂತಹ ಹಲವು ಸಮಸ್ಯೆಗಳಿಗೆ ರೋಗನಿರೋಧಕ ಶಕ್ತಿಯಾಗಿ ಕೆಲಸ ಮಾಡುತ್ತದೆ.
ಕೋಳಿ ಮಾಂಸವು ಯಥೇಚ್ಛವಾದ ವಿಟಮಿನ್ ಗಳು ಮತ್ತು ಖನಿಜಾಂಶಗಳನ್ನು ಹೊಂದಿದೆ. ಇದರಲ್ಲಿನ ವಿಟಮಿನ್ ಬಿ ಚರ್ಮದ ತೊಂದರೆಗಳನ್ನು ನಿವಾರಿಸುತ್ತದೆ. ಮೈಗ್ರೇನ್, ಹೃದಯ ಸಂಬಂಧಿ ಸಮಸ್ಯೆಗಳು ಸೇರಿದಂತೆ ಮತ್ತಿತರೆ ಸಮಸ್ಯೆಗಳನ್ನು ನಿವಾರಿಸಬಲ್ಲದಾಗಿದೆ. ಇಷ್ಟೇ ಅಲ್ಲದೇ, ಕೋಳಿಮಾಂಸವು ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡುತ್ತದಂತೆ.