ಲವಂಗದ ಎಲೆ ಎಲ್ಲರ ಅಡುಗೆ ಮನೆಯಲ್ಲಿ ಬಳಸಲಾಗುತ್ತದೆ. ಇದನ್ನು ಮಸಾಲೆ ಪದಾರ್ಥವಾಗಿ ಬಳಸಲಾಗುತ್ತದೆ. ಇದ್ರಲ್ಲಿ ಸಾಕಷ್ಟು ಔಷಧಿ ಗುಣವಿದೆ. ತಾಮ್ರ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣದ ಅಂಶ ಲವಂಗದ ಎಲೆಗಳಲ್ಲಿ ಸಾಕಷ್ಟಿದೆ. ಇದು ಕ್ಯಾನ್ಸರ್, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳನ್ನು ದೂರವಿರಿಸುತ್ತದೆ.
ಲವಂಗದ ಎಲೆ ಕಷಾಯ ಸೇವನೆ ಮಾಡುವುದ್ರಿಂದ ಸಾಕಷ್ಟು ಪ್ರಯೋಜನವಿದೆ. ಕಷಾಯ ತಯಾರಿಸಲು ನಾಲ್ಕು ಲವಂಗದ ಎಲೆಗಳನ್ನು ಅರ್ಧ ಚಮಚ ಅಜ್ವೈನ್ ಹಾಗೂ ಅರ್ಧ ಚಮಚ ಸೋಂಪು ಸೇರಿಸಿ ಮಿಕ್ಸಿ ಮಾಡಿ. ಒಂದು ಲೋಟ ನೀರಿಗೆ ಈ ಮಿಶ್ರಣವನ್ನು ಹಾಕಿ ಕುದಿಸಿ. ಸ್ವಲ್ಪ ಸಮಯ ಬಿಟ್ಟು ಅದಕ್ಕೆ ಉಪ್ಪು ಅಥವಾ ಜೇನು ತುಪ್ಪವನ್ನು ಹಾಕಿ ಕುಡಿಯಿರಿ.
ನೆಗಡಿಯಾಗಿ ಮೈ-ಕೈ ನೋವು ಕಾಡ್ತಿದ್ದರೆ ಈ ಕಷಾಯವನ್ನು ಸೇವಿಸಬೇಕು. ಶೀಘ್ರವೇ ನೋವಿನಿಂದ ನೆಮ್ಮದಿ ನೀಡಲಿದೆ. ತಲೆ ನೋವು ಕಾಡುತ್ತಿದ್ದರೂ ಲವಂಗದ ಎಲೆ ಕಷಾಯ ಕುಡಿಯುವುದ್ರಿಂದ ಆರಾಮ ಸಿಗುತ್ತದೆ. ಮಲಗುವ ವೇಳೆ ಉಳುಕಿ ನೋವಾಗಿದ್ದರೂ ಇದಕ್ಕೆ ಲವಂಗದ ಎಲೆ ಕಷಾಯ ಒಳ್ಳೆಯದು. ಬೆನ್ನು ನೋವು ಕಾಡುತ್ತಿದ್ದರೆ ದಿನದಲ್ಲಿ ಎರಡು ಬಾರಿ ಈ ಕಷಾಯ ಸೇವನೆ ಮಾಡಬೇಕು.