ಕಲ್ಲುಸಕ್ಕರೆ ತಿನ್ನಲು ಎಷ್ಟು ಸಿಹಿಯಾಗಿದೆಯೋ ಆರೋಗ್ಯಕ್ಕೂ ಕೂಡ ಅಷ್ಟೇ ಉತ್ತಮ. ಇದರಲ್ಲಿ ಅನೇಕ ಆರೋಗ್ಯಕರ ಅಂಶಗಳು ಅಡಗಿರುತ್ತದೆ. ಅನೇಕ ರೋಗಗಳಿಗೆ ಇದು ರಾಮಬಾಣವಾಗಿದೆ.
* ಇದು ಹಿಮೋಗ್ಲೋಬಿನ್ ನ್ನು ಹೆಚ್ಚಿಸಿ ರಕ್ತಹೀನತೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
* ಗಂಟಲು ನೋವಿದ್ದರೂ ಕಲ್ಲುಸಕ್ಕರೆಯನ್ನು ತಿನ್ನುವುದರಿಂದ ತಕ್ಷಣ ಪರಿಹಾರ ಕಾಣಬಹುದು.
* ಹಾಗೆಯೇ ಒಣಕೆಮ್ಮು ಮತ್ತು ಹಸಿಕೆಮ್ಮಿನ ಸಮಸ್ಯೆಗಳಿಗೆ ಪರಿಹಾರವಾಗಿ ಕಲ್ಲುಸಕ್ಕರೆಯನ್ನು ತಿನ್ನುವುದು ಉತ್ತಮ. ಆದರೆ ಕಲ್ಲುಸಕ್ಕರೆಯನ್ನು ತಿಂದ ಬಳಿಕ ನೀರು ಕುಡಿಯುವುದರಿಂದ ಕೆಮ್ಮು ಹೆಚ್ಚಾಗಬಹುದು.
* ರಾತ್ರಿ ಮಲಗುವ ವೇಳೆ ಕಲ್ಲುಸಕ್ಕರೆಯನ್ನು ಕರಿಮೆಣಸಿನ ಪುಡಿಯೊಂದಿಗೆ ಮಿಶ್ರಣ ಮಾಡಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.