ಚೆನ್ನೈ: ತಮಿಳುನಾಡಿನ ರಾಜಧಾನಿಯಲ್ಲಿ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ. ಕುಡಿಯುವ ನೀರಿನ ಕೆರೆಯಲ್ಲಿ ತಲೆ ಮತ್ತು ಕೈಕಾಲುಗಳಿಲ್ಲದ ಶವ ಪತ್ತೆಯಾಗಿದೆ.
ಮೀನುಗಾರರ ಗುಂಪು ಚೆನ್ನೈನ ಚೆಂಬರಂಬಕ್ಕ ಸರೋವರದಿಂದ ಮೃತದೇಹವನ್ನು ಹೊರಗೆ ತೆಗೆದಿದೆ. ಹುಡುಕಾಟದ ನಂತರ ಕತ್ತರಿಸಿದ ಕಾಲು ಸಹ ಪತ್ತೆಯಾಗಿದೆ. ಸಾವನ್ನಪ್ಪಿದ ವ್ಯಕ್ತಿಗೆ ಸುಮಾರು 30 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಶವದ ಹೊಟ್ಟೆಯಲ್ಲಿ ಇರಿತದ ಗಾಯವಿದೆ.
ವ್ಯಕ್ತಿಯ ದೇಹವನ್ನು ಉದ್ದೇಶಪೂರ್ವಕವಾಗಿ ಕೊಲೆ ಮಾಡಿ ಬಂಡೆಗೆ ಕಟ್ಟಿ ಕೆರೆಗೆ ಎಸೆಯಲಾಗಿದೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.