ಕೊಪ್ಪಳ: ಹೆಡ್ ಕಾನ್ಸ್ ಟೇಬಲ್ ಓರ್ವರಿಂದ ಮೊಬೈಲ್ ನಂಬರ್ ಗಳ ಸಿಡಿಆರ್, ಟವರ್ ಲೊಕೇಷನ್ ಸೇರಿದಂತೆ ಗೌಪ್ಯ ಮಾಹಿತಿ ಸೋರಿಕೆ ಆಗಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ ಹೆಚ್ ಸಿ ನಾಪತ್ತೆಯಾಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳ ನಗರದ ಸಿಇಎನ್ ಠಾಣೆ ಹೆಡ್ ಕಾನ್ಸ್ ಟೇಬಲ್ ಕೋಟೆಪ್ಪ ವಿರುದ್ಧ ಸಿಇಎನ್ ಠಾಣೆ ಎಸ್ ಐ ಪ್ರಕರಣ ದಾಖಲಿಸಿದ್ದು, ಕೇಸ್ ದಾಖಲಾಗುತ್ತಿದ್ದಂತೆ ಕೋಟೆಪ್ಪ ನಾಪತ್ತೆಯಾಗಿದ್ದಾರೆ.
ಮೆಲಧಿಕಾರಿಗಳ ಅನುಮತಿಯಿಲ್ಲದೇ ಸಿಡಿಆರ್, ಟವರ್ ಲೊಕೇಷನ್ ಮತ್ತಿತರ ಗೌಪ್ಯ ಮಾಹಿತಿಗಳನ್ನು ಹೆಡ್ ಕಾನ್ಸ್ ಟೇಬಲ್ ಕೋಟೆಪ್ಪ ಸೋರಿಕೆ ಮಡುತ್ತಿದ್ದರು. ಹಣ ಪಡೆದು 145 ಮೊಬೈಲ್ ಸಿಡಿಆರ್, 9 ಟವರ್ ಡಂಪ್ ಮಾಹಿತಿ ಸೋರಿಕೆ ಮಾಡಿರುವ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಕೋಟೆಪ್ಪ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಕೇಸ್ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.