ಇಂಧನ ಕೊರತೆಯಿಂದಾಗಿ ಬ್ರಿಟನ್ನ 2000ಕ್ಕೂ ಅಧಿಕ ಪೆಟ್ರೋಲ್ ಬಂಕ್ಗಳು ಗುರುವಾರವೂ ಸಹ ಬಿಕೋ ಎನ್ನುತ್ತಿವೆ. ಗ್ಯಾಸ್ ಸ್ಟೇಷನ್ಗಳಿಗೆ ಇಂಧನವನ್ನು ಪೂರೈಕೆ ಮಾಡಲು ಟ್ರಕ್ ಚಾಲಕರ ಕೊರತೆಯಿಂದಾಗಿ ಈ ಅಭಾವ ಸೃಷ್ಟಿಯಾಗಿದೆ.
ಬಹಳ ಮಂದಿ ಹಳೆ ಬಾಟಲಿಗಳಲ್ಲಿ ಪೆಟ್ರೋಲ್ ತುಂಬಿಕೊಳ್ಳುತ್ತಿರುವ ನಡುವೆ ಸರ್ರೆಯ ಥೇಮ್ಸ್ ಡಿಟ್ಟನ್ನ ಪೆಟ್ರೋಲ್ ನಿಲ್ದಾಣವೊಂದರಲ್ಲಿ ವ್ಯಕ್ತಿಯೊಬ್ಬ ಅಶ್ವಾರೋಹಿಯಾಗಿ ಬಂದು ಎಲ್ಲರ ಗಮನ ಸೆಳೆದಿದ್ದಾನೆ.
ಈ ರಿಯಾಲಿಟಿ ಶೋನಲ್ಲಿ ಬಟ್ಟೆ ಇಲ್ಲದೆ 21 ದಿನ ಒಟ್ಟಿಗಿರಬೇಕು ಜೋಡಿಗಳು..!
ಸ್ಟರ್ರಪ್ ಹೆಸರಿನ ಕುದುರೆ ಮೇಲೇರಿದ ಗಸ್ ಲೀ-ಡಾಲ್ಫಿನ್ ಹತಾಶ ಚಾಲಕರ ಸುದೀರ್ಘ ಸರತಿಯೊಂದನ್ನು ದಾಟಿ ಬಂದು, “ಪೆಟ್ರೋಲ್ಗಾಗಿ ಸರತಿಯೇ, ಆದರೆ ನಾನು ಕುದುರೆ ಮೇಲೆ ಬಂದಿದ್ದೇನೆ. ನನಗೆ ಪೆಟ್ರೋಲ್ ಬೇಕಿಲ್ಲ ಏಕೆಂದರೆ ಇವನು ಕ್ಯಾರೆಟ್ ತಿಂದು ಓಡುತ್ತಾನೆ. ನನಗೆ ಪೆಟ್ರೋಲ್ ಬೇಕಿಲ್ಲ ಏಕೆಂದರೆ ನಾನು ಕುದುರೆ ಮೇಲೆ ಇದ್ದೇನೆ,” ಎಂದು ಕುದುರೆ ಸವಾರಿಯ ತನ್ನ ಚಿತ್ರವನ್ನು ಗಸ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾನೆ.