ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಶನಿವಾರ ನಡೆದ ಎರಡು ಎನ್‌ಕೌಂಟರ್‌ಗಳಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಸೈನಿಕರಲ್ಲಿ ಒಬ್ಬರಾಗಿದ್ದ ಪ್ರವೀಣ್ ಜಂಜಾಲ್ ಅವರು ಒಂದು ವರ್ಷದ ಹಿಂದೆ ವಿವಾಹವಾಗಿದ್ದರು. 25 ವರ್ಷ ವಯಸ್ಸಿನ ಪ್ರವೀಣ್ ಜಂಜಾಲ್ ನಾಗ್ಪುರದ ನಿವಾಸಿ. ಹುತಾತ್ಮರಾಗುವ ಎರಡು ಗಂಟೆ ಮೊದಲು ಕುಟುಂಬ ಸದಸ್ಯರೊಂದಿಗೆ ದೂರವಾಣಿ ಕರೆ ಮಾಡಿದ್ದರು.
ವರದಿಯೊಂದರ ಪ್ರಕಾರ, ಪ್ರವೀಣ್ ತನ್ನ ಪತ್ನಿ ಶ್ಯಾಮಬಾಲಾಳನ್ನು ಒಂದು ವರ್ಷದ ಹಿಂದೆ ವಿವಾಹವಾಗಿದ್ದರು. ಅವರ ತಂದೆ ಬಳಿ ಬರೀ ಒಂದೂವರೆ ಎಕರೆ ಜಮೀನನ್ನು ಉಳುಮೆ ಮಾಡುತ್ತ ಜೀವನ ಸಾಗಿಸುತ್ತಿದ್ದರು. ಅವರ ಈ ದುಡಿಮೆಯಲ್ಲೇ ಅವರ ಜೀವನ ಸಾಗಿತ್ತು. ಪ್ರವೀಣ್ ಸೈನ್ಯಕ್ಕೆ ಸೇರಿದ ನಂತರವೇ ಕುಟುಂಬದ ಪರಿಸ್ಥಿತಿ ಸುಧಾರಿಸಿತ್ತು ಎಂದು ಪ್ರವೀಣ್ ಅವರ ಸೋದರ ಸಂಬಂಧಿ ಶೈಲೇಶ್ ಗವಾಯಿ ಹೇಳಿದ್ದಾರೆ.
ಪ್ರವೀಣ್ ತನ್ನ ಮೊದಲ ಪ್ರಯತ್ನದಲ್ಲಿಯೇ ಸೈನಕ್ಕೆ ಆಯ್ಕೆಯಾದರು. ಅವರನ್ನು 2 ನೇ ಮಹಾರ್ ರೆಜಿಮೆಂಟ್‌ಗೆ ನೇಮಿಸಲಾಯಿತು ಮತ್ತು ನಂತರ ಅವರನ್ನು ರಾಷ್ಟ್ರೀಯ ರೈಫಲ್ಸ್‌ಗೆ ಕಳುಹಿಸಲಾಯಿತು. ಕಾಶ್ಮೀರದಲ್ಲಿ ಪೋಸ್ಟಿಂಗ್ ಮಾಡುವ ಮೊದಲು ಅರುಣಾಚಲ ಪ್ರದೇಶದಲ್ಲಿ ಅವರನ್ನು ನಿಯೋಜಿಸಲಾಗಿತ್ತು. ಪ್ರವೀಣ್ ತಮ್ಮ ಹೊಸ ಮನೆ ಕನಸನ್ನು ನನಸು ಮಾಡಿಕೊಳ್ಳುವ ಖುಷಿಯಲ್ಲಿದ್ದರು. ಎರಡು ಗಂಟೆ ಹಿಂದೆ ಕರೆ ಮಾಡಿದ್ದ ಅವರು, ಮನೆ ನಿರ್ಮಾಣಕ್ಕೆ ಅಗತ್ಯ ಇರುವ ಹಣವನ್ನು ಯುಪಿಐ ಮಾಡಿದ್ದಾಗಿ ಕುಟುಂಬಕ್ಕೆ ತಿಳಿಸಿದ್ದರು. ಆದ್ರೆ ಅವರ ಕನಸು ಎರಡೇ ಗಂಟೆಯಲ್ಲಿ ಭಗ್ನವಾಯ್ತು. ಕುಟುಂಬಸ್ಥರು ಮಾತ್ರವಲ್ಲದೆ ಇಡೀ ದೇಶ ಅಮೂಲ್ಯ ರತ್ನವನ್ನು ಕಳೆದುಕೊಂಡಿತು.