ಈ ಬಾರಿ ವೆಸ್ಟ್ ಇಂಡೀಸ್ ಮತ್ತು ಯು ಎಸ್ ಎ ನಲ್ಲಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಬಲಿಷ್ಠ ಬ್ಯಾಟ್ಸ್ಮನ್ಗಳನ್ನು ಹೊಂದಿರುವ ಭಾರತ ತಂಡ ಟ್ರೋಫಿ ಎತ್ತುವ ನಿರೀಕ್ಷೆಯಲ್ಲಿದೆ. 2007ರಲ್ಲಿ ಎಂ ಎಸ್ ಧೋನಿ ನಾಯಕತ್ವದಲ್ಲಿ ಟಿ ಟ್ವೆಂಟಿ ವಿಶ್ವಕಪ್ ಗೆದ್ದಿದ್ದ ಭಾರತ ತಂಡ 17 ವರ್ಷಗಳ ಬಳಿಕ ಇದೀಗ ಮತ್ತೊಮ್ಮೆ ಟಿ 20 ವಿಶ್ವಕಪ್ ಕಿರೀಟ ಎತ್ತಿ ಹಿಡಿಯಲಿದೆಯಾ ಕಾದು ನೋಡಬೇಕಾಗಿದೆ.
ಟಿ20 ವಿಶ್ವಕಪ್ ಇತಿಹಾಸದಲ್ಲಿ ಬ್ಯಾಟ್ಸ್ಮನ್ ಗಳನ್ನು ಅತಿ ಹೆಚ್ಚು ಬಾರಿ ಔಟ್ ಮಾಡಿದ ವಿಕೆಟ್ ಕೀಪರ್ ಎಂಬ ಕೀರ್ತಿ ಭಾರತ ತಂಡದ ಎಂ ಎಸ್ ಧೋನಿ ಅವರಿಗೆ ಸಲ್ಲುತ್ತದೆ. ಟಿ20 ವಿಶ್ವಕಪ್ ನಲ್ಲಿ 32 ಬಾರಿ ಬ್ಯಾಟ್ಸ್ಮನ್ ಗಳನ್ನು ಪೆವಿಲಿಯನ್ ದಾರಿಗೆ ಕಳಿಸಿದ್ದಾರೆ.
ಅತಿ ಹೆಚ್ಚು ಬಾರಿ ಬ್ಯಾಟ್ಸ್ಮನ್ ಗಳನ್ನು ಔಟ್ ಮಾಡಿದ ವಿಕೆಟ್ ಕೀಪರ್ ಗಳ ಪಟ್ಟಿ ಈ ರೀತಿ ಇದೆ
ದೇಶ ಆಟಗಾರ ಡಿಸ್ ಮಿಸಲ್ಸ್
ಭಾರತ ಎಂ ಎಸ್ ಧೋನಿ 32
ಪಾಕಿಸ್ತಾನ ಕಮ್ರಾನ್ ಅಕ್ಮಲ್ 30
ವೆಸ್ಟ್ ಇಂಡೀಸ್ ದಿನೇಶ್ ರಾಮ್ದೀನ್ 27
ಶ್ರೀಲಂಕಾ ಕುಮಾರ್ ಸಂಗಕಾರ 26
ದಕ್ಷಿಣ ಆಫ್ರಿಕಾ ಕ್ವಿಂಟನ್ ಡಿಕಾಕ್ 22