ನವದೆಹಲಿ: ದೆಹಲಿ ಮೆಟ್ರೋ ಕೋಚ್ ನಲ್ಲಿ ಸೀಟ್ ನಲ್ಲಿ ಕುಳಿತು ಸಾರ್ವಜನಿಕವಾಗಿ ಹಸ್ತಮೈಥುನ ಮಾಡಿಕೊಳ್ಳುತ್ತಿರುವ ವ್ಯಕ್ತಿಯನ್ನು ಗುರುತಿಸಲು ಸಹಾಯ ಮಾಡುವಂತೆ ಪೊಲೀಸರು ಜನರನ್ನು ಕೋರಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಸ್ತಮೈಥುನ ಮಾಡಿಕೊಳ್ಳುತ್ತಿರುವ ವ್ಯಕ್ತಿಯನ್ನು ಗುರುತಿಸಲು ಡಿಸಿಪಿ ಮೆಟ್ರೋ ಸಾರ್ವಜನಿಕರ ಸಹಾಯವನ್ನು ಕೋರಿದೆ.
ಆತನ ಫೋಟೋ ಪ್ರಕಟಿಸಿ, ಬೇಕಾಗಿದ್ದಾನೆ, ೀತನ ಗುರುತು ಬಲ್ಲವರು ದಯವಿಟ್ಟು SHO IGIA ಮೆಟ್ರೋಗೆ 8750871326 ಅಥವಾ 1511(ನಿಯಂತ್ರಣ ಕೊಠಡಿ) ಅಥವಾ 112(ಪೊಲೀಸ್ ಸಹಾಯವಾಣಿ) ಗೆ ತಿಳಿಸಿ. ಮಾಹಿತಿ ನೀಡುವವರ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದು ಮೆಟ್ರೋ ಡಿಸಿಪಿ ಟ್ವೀಟ್ ಮಾಡಿದ್ದಾರೆ.
ಮೆಟ್ರೋದಲ್ಲಿ ಪ್ರಯಾಣಿಸುವಾಗ ವ್ಯಕ್ತಿ ಅಶ್ಲೀಲ ಕೃತ್ಯದಲ್ಲಿ ತೊಡಗಿರುವುದನ್ನು ವಿಡಿಯೋ ತೋರಿಸಿದೆ. ಮತ್ತೊಬ್ಬ ಪ್ರಯಾಣಿಕರಿಂದ ರೆಕಾರ್ಡ್ ಮಾಡಲಾಗಿದೆ. ಪೊಲೀಸರು ಸ್ವಯಂ ಪ್ರೇರಿತ ಕ್ರಮ ಕೈಗೊಂಡಿದ್ದಾರೆ ಮತ್ತು ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.
ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು, ಇದನ್ನು ಸಂಪೂರ್ಣವಾಗಿ ಅಸಹ್ಯಕರ ಮತ್ತು ಅನಾರೋಗ್ಯಕರ ಎಂದು ಹೇಳಿದ್ದು, ಈ ನಾಚಿಕೆಗೇಡಿನ ಕೃತ್ಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಾನು ದೆಹಲಿ ಪೊಲೀಸರು ಮತ್ತು ದೆಹಲಿ ಮೆಟ್ರೋಗೆ ನೋಟಿಸ್ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.