ಜೈಪುರ: ಕೌಟುಂಬಿಕ ಕಲಹ ಹಿನ್ನೆಲೆ ತನ್ನ ಚಿಕ್ಕಪ್ಪ, ಚಿಕ್ಕಮ್ಮನನ್ನೇ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ರಾಜಸ್ಥಾನದ ಭಿಲ್ವಾರಾದಲ್ಲಿ ನಡೆದಿದೆ.
ಆರೋಪಿಯನ್ನು ದೇವಿಲಾಲ್ ಎಂದು ಗುರುತಿಸಲಾಗಿದೆ. ವೃದ್ಧ ದಂಪತಿಯನ್ನು ಕೊಲೆ ಮಾಡಲು ಹರಿತವಾದ ಆಯುಧವನ್ನು ಬಳಸಲಾಗಿದೆ ಎಂದು ಹೇಳಲಾಗಿದೆ.
ಘಟನೆಯ ನಂತರ ಸ್ವತಃ ತಾನೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಆರೋಪಿಯು ಈ ಹಿಂದೆ ಯಾವುದೇ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಿದ್ದಾನೆಯೇ ಎಂದು ಪತ್ತೆ ಮಾಡಲು ತನಿಖೆ ನಡೆಯುತ್ತಿದೆ. ಮೃತರನ್ನು ಕಣಕು ದೇವಿ ಮತ್ತು ನಾರು ಎಂದು ಗುರುತಿಸಲಾಗಿದೆ.
ಕುತೂಹಲ ಮೂಡಿಸಿದ ಸಚಿವ ಆನಂದ್ ಸಿಂಗ್ ನಡೆ; ನಾಳೆಯೇ ರಾಜೀನಾಮೆ…?
ಶನಿವಾರ ಮುಂಜಾನೆ 5 ಗಂಟೆ ಸುಮಾರಿಗೆ ಕಂಕು ದೇವಿ ತನ್ನ ಮನೆಯಿಂದ ಹೊರಗೆ ಬಂದು ಹತ್ತಿರದ ದನದ ಕೊಟ್ಟಿಗೆಗೆ ತೆರಳುತ್ತಿದ್ದಾಗ ಆರೋಪಿ ಆಕೆಯ ತಲೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಬೊಬ್ಬೆ ಹೊಡೆದ ಸದ್ದು ಕೇಳಿ ನಾರು ಹೊರಬಂದಾಗ, ಆರೋಪಿ ಆತನ ಮೇಲೂ ದಾಳಿ ನಡೆಸಿದ್ದಾನೆ. ಈತ ಹರಿತವಾದ ಆಯುಧಗಳಿಂದ ದಾಳಿ ಮಾಡಿದ್ದಾನೆ ಎಂದು ಹೇಳಲಾಗಿದೆ.
ದಂಪತಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಬಳಿಕ ಆರೋಪಿಯೇ ಪೊಲೀಸರಿಗೆ ಕರೆ ಮಾಡಿ ಇಬ್ಬರನ್ನು ಕೊಂದಿರುವುದಾಗಿ ಹೇಳಿಕೊಂಡಿದ್ದಾನೆ. ಅಲ್ಲದೆ ತನ್ನನ್ನು ಬಂಧಿಸುವಂತೆ ಕೇಳಿಕೊಂಡಿದ್ದಾನೆ ಎಂದು ವರದಿಯಾಗಿದೆ.