
ಮನುಷ್ಯನ ಜೀವನ ಅದೆಷ್ಟು ಅಲ್ಪ…..ಸಾವು ಎಂಬುದು ಯಾವುದೇ ಕ್ಷಣದಲ್ಲಿ ಹೇಗೆ ಬೇಕಾದರೂ ಬರಬಹುದು ಎಂಬುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಸಾಕ್ಷಿ.
ವ್ಯಕ್ತಿಯೋರ್ವ ತನ್ನ ಕುಟುಂಬದ ಜೊತೆ ಹೋಟೆಲ್ ಗೆ ಊಟಕ್ಕೆ ಬಂದಿದ್ದಾರೆ. ಕುಟುಂಬ ಸದಸ್ಯರು ಖುಷಿ ಖುಷಿಯಾಗಿ ಭರ್ಜರಿ ಭೋಜನಕ್ಕೆ ಆರ್ಡರ್ ಮಾಡಿದ್ದಾರೆ. ಆರ್ಡರ್ ಮಾಡಿದ ಊಟ, ತಿನಿಸು ಟೇಬಲ್ ಮೇಲೆ ಬಂದಿದೆ. ಇನ್ನೇನು ಊಟ ಮಡಬೇಕು ಎನ್ನುವಷ್ಟರಲ್ಲಿ ವ್ಯಕ್ತಿ ಟೇಬಲ್ ಮೇಲೆಯೇ ನಿತ್ರಾಣನಾಗಿ ಕುಸಿದಿದ್ದಾರೆ.
ಕುಟುಂಬದವರು ಆತನನ್ನು ಕುರ್ಚಿ ಮೇಲೆ ಒರಗುವಂತೆ ಸಾವರಿಸಿದ್ದಾರೆ. ಕ್ಷಣಾರ್ಧದಲ್ಲೇ ವ್ಯಕ್ತಿ ಕುರ್ಚಿಯಿಂದಲೂ ಕುಸಿದು ಬಿದ್ದಿದ್ದಾರೆ……. ತಕ್ಷಣ ಮನೆಯವರು, ಹೋಟೆಲ್ ಸಿಬ್ಬಂದಿ ಆತನನ್ನು ಎತ್ತಿಕೊಂಡು ಆಸ್ಪತ್ರೆಗೆ ದೌಡಾಯಿಸಿದ್ದಾರೆ ಆದರೆ ಪ್ರಯೋಜನವಾಗಿಲ್ಲ, ಅಷ್ಟರಲ್ಲಿ ಪ್ರಾಣಪಕ್ಷಿಯೇ ಹಾರಿಹೋಗಿತ್ತು ಎನ್ನಲಾಗಿದೆ. ಹೋಟೆಲ್ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವ ಈ ದೃಶ್ಯ ಎದೆಯಾಳದಲ್ಲಿ ನಡುಕ ಹುಟ್ಟಿಸುವಂತಿದೆ. ಮನುಷ್ಯನ ಜೀವನ ಅದೆಷ್ಟು ಕ್ಷಣಿಕ…….ಈಗಷ್ಟೇ ಕಣ್ಮುಂದೆ ಇರುವವರು ಇನ್ನೊಂದು ಕ್ಷಣದಲ್ಲಿ ಇಲ್ಲ ಎಂಬ ವಿಷಯ ಎದೆಬಡಿತವನ್ನು ಹೆಚ್ಚಿಸುವಂತಿದೆ.