
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ನಲ್ಲಿ ವಿಶೇಷತೆ ಏನೂ ಇಲ್ಲ, ಜನರ ಮೇಲೆ ಸಾಲದ ಹೊರೆ ಹೊರಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಬಜೆಟ್ ನಲ್ಲಿ ದುಡಿಯುವ ಕೈಗಳಿಗೆ ಸ್ವಾಲಂಭಿಯಾಗಲು ಯಾವ ಯೋಜನೆ ಘೋಷಿಸಿದ್ದಾರೆ? ಆದಾಯ ಹೆಚ್ಚಳಕ್ಕೆ ಅಬಕಾರಿ ಸುಂಕ ಹೆಚ್ಚಿಸಿದ್ದಾರೆ ಎಂದು ಕಿಡಿಕಾರಿದರು.
ಒಂದೇ ವರ್ಷಕ್ಕೆ ಜನರ ಮೇಲೆ 85,000ಕೋಟಿ ಸಾಲ ಹೇರುತ್ತಿದ್ದಾರೆ. 1995ರಿಂದ ಈವರೆಗೆ ಸಿದ್ದರಾಮಯ್ಯ ಮಂದಿಸಿದ 13 ಬಜೆಟ್ ಅಧ್ಯಯನ ಮಾಡಿದ್ದೇನೆ ಎಂದರು. ಅನ್ನಭಾಗ್ಯ ಹೆಚ್ಚುವರಿ ಅಕ್ಕಿಗಾಗಿ ಹಣ ನೀಡುತ್ತಿದ್ದಾರೆ. ಅನ್ನಭಾಗ್ಯ ಅಕ್ಕಿಗೆ ಕೊಡುವ ಹಣ ಅಬಕಾರಿ ಇಲಾಖೆಗೆ ಹೋಗುತ್ತದೆ. ಆತ ಅನ್ನಭಾಗ್ಯ ಹಣ ಪದೆದು ಮನೆಗೆ ಹೋಗುತ್ತಾನೋ ಇನ್ನೆಲ್ಲಿಗೆ ಹೋಗುತ್ತಾನೋ…ಎಂದು ವ್ಯಂಗ್ಯವಾಡಿದ್ದಾರೆ.