ಬ್ಯಾಂಕ್ ನಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವವರಿಗೊಂದು ಮಹತ್ವದ ಸುದ್ದಿಯಿದೆ. ಹೆಚ್.ಡಿ.ಎಫ್.ಸಿ. ಬ್ಯಾಂಕ್ ಉದ್ಯೋಗವಕಾಶವನ್ನು ನೀಡುತ್ತಿದೆ. ದೇಶದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಹೆಚ್.ಡಿ.ಎಫ್.ಸಿ. ಬ್ಯಾಂಕ್ ಮುಂದಿನ 6 ತಿಂಗಳಲ್ಲಿ 2500 ಉದ್ಯೋಗ ನೀಡುವ ಸಿದ್ಧತೆ ನಡೆಸಿದೆ. ಮುಂದಿನ 18-24 ತಿಂಗಳಲ್ಲಿ ಬ್ಯಾಂಕ್ ತನ್ನ ವ್ಯಾಪ್ತಿಯನ್ನು 2 ಲಕ್ಷ ಗ್ರಾಮಗಳಿಗೆ ವಿಸ್ತರಿಸುವ ಗುರಿಯನ್ನು ಹೊಂದಿದೆ.
ಗ್ರಾಮೀಣ ಬ್ಯಾಂಕಿಂಗ್ ಸೌಲಭ್ಯವನ್ನು 1 ಲಕ್ಷಕ್ಕೂ ಹೆಚ್ಚು ಗ್ರಾಮಗಳಿಗೆ ವಿಸ್ತರಿಸಿದೆ. ಈಗ ಬ್ಯಾಂಕ್ ತನ್ನ ವ್ಯಾಪ್ತಿಯನ್ನು 2 ಲಕ್ಷ ಗ್ರಾಮಗಳಿಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಮುಂದಿನ 6 ತಿಂಗಳಲ್ಲಿ 2500 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುವ ಯೋಜನೆಯನ್ನು ಬ್ಯಾಂಕ್ ಹೊಂದಿದೆ.
ಹೆಚ್.ಡಿ.ಎಫ್.ಸಿ. ಬ್ಯಾಂಕ್ ವಾಣಿಜ್ಯ ಮತ್ತು ಗ್ರಾಮೀಣ ಬ್ಯಾಂಕಿಂಗ್ ಗ್ರೂಪ್ ಮುಖ್ಯಸ್ಥ ರಾಹುಲ್ ಶುಕ್ಲಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ದೇಶದ ಪ್ರತಿಯೊಂದು ಪಿನ್‌ಕೋಡ್‌ಗೆ ಬ್ಯಾಂಕಿಂಗ್ ಸೇವೆ ಒದಗಿಸುವುದು ಹೆಚ್.ಡಿ.ಎಫ್.ಸಿ. ಬ್ಯಾಂಕಿನ ಕನಸೆಂದು ಅವರು ಹೇಳಿದ್ದಾರೆ. ಪ್ರಸ್ತುತ ದೇಶದ 550 ಜಿಲ್ಲೆಗಳ ಜನರಿಗೆ ಈ ಬ್ಯಾಂಕ್ ಸೇವೆ ನೀಡ್ತಿದೆ.