ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್, ಸಾಲವನ್ನು ಇತ್ಯರ್ಥಗೊಳಿಸಲು ಅನಧಿಕೃತ ರೀತಿಯಲ್ಲಿ ಗ್ರಾಹಕರ ಖಾತೆಯಿಂದ 56,763 ರೂಪಾಯಿ ತೆಗೆದುಕೊಂಡಿದೆ. ಇದಕ್ಕೂ ಮುನ್ನ ಬ್ಯಾಂಕ್ ಯಾವುದೇ ಮಾಹಿತಿಯನ್ನು ಗ್ರಾಹಕನಿಗೆ ನೀಡಿಲ್ಲ.
ಎಚ್‌ಡಿಎಫ್‌ಸಿ ಗುರುಗ್ರಾಮ್ ಶಾಖೆಯಲ್ಲಿ ಈ ಘಟನೆ ನಡೆದಿದೆ. ಗ್ರಾಹಕ ಬೇಡಿಗೆ ಸಲ್ಲಿಸದೆ ಹೋದ್ರೂ ಕ್ರೆಡಿಟ್ ಕಾರ್ಡ್ ನೀಡಲಾಗಿತ್ತು. ಆದ್ರೆ ಯಾವುದೇ ವಹಿವಾಟು ನಡೆಸಿರಲಿಲ್ಲ. 2015-2016 ರಲ್ಲಿ ಮೊದಲ ಬಾರಿ ಬ್ಯಾಂಕ್, ಗ್ರಾಹಕನಿಗೆ ಕ್ರೆಡಿಟ್ ಕಾರ್ಡ್ ಬಿಲ್ ಕಳಸಲು ಶುರು ಮಾಡಿತ್ತು.
ಆದ್ರೆ ಗ್ರಾಹಕ,ಯಾವುದೇ ವಹಿವಾಟು ನಡೆಸಿರಲಿಲ್ಲ. ಬ್ಯಾಂಕ್ 14,500 ರೂಪಾಯಿ ಬಿಲ್ ಕಳುಹಿಸಿತ್ತು. ಗ್ರಾಹಕ ಈ ಬಗ್ಗೆ ಬ್ಯಾಂಕ್ ಸಿಬ್ಬಂದಿ ಬಳಿ ವಿಚಾರಿಸಿದ್ದ. ಬ್ಯಾಂಕ್ ನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಬ್ಯಾಂಕ್ ವ್ಯವಸ್ಥಾಪಕರನ್ನು ಭೇಟಿಯಾದಾಗ, ಕಾರ್ಡ್ ರದ್ದು ಮಾಡುವುದಾಗಿ ಹೇಳಿದ್ದರು. ಆದ್ರೆ ಕಾರ್ಡ್ ರದ್ದಾಗಲಿಲ್ಲ. 2021ರಲ್ಲಿ ಬ್ಯಾಂಕ್ ಮತ್ತೆ ಕಿರುಕುಳ ಶುರು ಮಾಡಿತ್ತು.
ಬ್ಯಾಂಕ್, ಕ್ರೆಡಿಟ್ ಕಾರ್ಡ್ ಹೊಂದಿದ್ದ ಗ್ರಾಹಕನಿಗೆ ಲೀಗಲ್ ನೋಟಿಸ್ ಕಳುಹಿಸಿತ್ತು. ಗ್ರಾಹಕ ಎಚ್.ಡಿ.ಎಫ್.ಸಿ. ಸ್ಟ್ಯಾಂಡರ್ಡ್ ಲೈಫ್ ಪಾಲಿಸಿ ಹೊಂದಿದ್ದ. ಈ ಹಣ ಪಕ್ವವಾದಾಗ, ಎಚ್.ಡಿ.ಎಫ್.ಸಿ. ಬ್ಯಾಂಕ್, ಈ ಹಣವನ್ನು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯಾಗಿ ಸ್ವೀಕರಿಸಿದೆ. ಗ್ರಾಹಕನಿಗೆ ತಿಳಿಸದೆ ಬ್ಯಾಂಕ್ ಖಾತೆಯಿಂದ 56,763 ರೂಪಾಯಿ ಪಡೆದಿದೆ. ಆದರೆ ರಿಸರ್ವ್ ಬ್ಯಾಂಕ್ ನಿಯಮಾವಳಿಗಳಂತೆ ಗ್ರಾಹಕರ ಅನುಮತಿಯಿಲ್ಲದೇ ಬ್ಯಾಂಕ್ ಈ ರೀತಿ ಹಣ ಪಡೆಯುವಂತಿಲ್ಲ. ಇದು ಗ್ರಾಹಕನಿಗೆ ಆಘಾತ ತಂದಿದೆ.