ನವದೆಹಲಿ: ದೇಶದಲ್ಲೇ ಅತಿ ದೊಡ್ಡ ಖಾಸಗಿ ವಲಯದ ಬ್ಯಾಂಕ್ ಎಂದು ಹೆಗ್ಗಳಿಕೆ ಪಡೆದಿರುವ ಎಚ್ಡಿಎಫ್ಸಿ ಬ್ಯಾಂಕ್, ಬರುವ ನವೆಂಬರ್ 1ರಿಂದ ಕೆಲವೊಂದು ಬದಲಾವಣೆಗಳನ್ನು ಮಾಡಲಿದೆ.
ಉಚಿತ ಮಿತಿಗಳನ್ನು ಮೀರಿದ ಠೇವಣಿಗಳಿಗೆ ನವೆಂಬರ್ 1 ರಿಂದ ಜಾರಿಗೆ ಬರುವಂತೆ ನಗದು ಠೇವಣಿ ಶುಲ್ಕವನ್ನು ಹೆಚ್ಚಿಸಲು ಬ್ಯಾಂಕ್ ಈಗ ನಿರ್ಧರಿಸಿದೆ. ಈ ಕುರಿತು ಬ್ಯಾಂಕ್ನ ವೆಬ್ಸೈಟ್ನಲ್ಲಿ ಮಾಹಿತಿ ನೀಡಲಾಗಿದೆ.
ಬ್ಯಾಂಕ್ ಈ ಹಿಂದೆ ಪ್ರತಿ 1000 ರೂ.ಗೆ 3 ರೂ ಅಥವಾ ಉಚಿತ ಮಿತಿಗಳನ್ನು ಮೀರಿ ಪ್ರತಿ ವಹಿವಾಟಿಗೆ ಕನಿಷ್ಠ 50 ರೂ. ವಿಧಿಸುತ್ತಿತ್ತು. ಇದೀಗ ಅಂದರೆ ನವೆಂಬರ್ 1 ರಿಂದ, ಬ್ಯಾಂಕ್ ಪ್ರತಿ 1000 ರೂ.ಗೆ 3.5 ರೂ. ಶುಲ್ಕ ವಿಧಿಸುತ್ತದೆ, ಹಾಗೂ ಉಚಿತ ಮಿತಿಗಳನ್ನು ಮೀರಿ ಪ್ರತಿ ವಹಿವಾಟಿಗೆ ಕನಿಷ್ಠ 50 ರೂ.ವಿಧಿಸುವುದಾಗಿ ಹೇಳಿದೆ.
ಬ್ಯಾಂಕ್ನ ವೆಬ್ಸೈಟ್ನಲ್ಲಿ ತಿಳಿಸಿರುವ ಮಾಹಿತಿಯ ಪ್ರಕಾರ, ಪರಿಷ್ಕೃತ ದರಗಳು ಮ್ಯಾಕ್ಸ್ ಅಡ್ವಾಂಟೇಜ್ ಕರೆಂಟ್ ಅಕೌಂಟ್, ಅಸೆಂಟ್ ಕರೆಂಟ್ ಅಕೌಂಟ್, ಆಕ್ಟೀವ್ ಕರೆಂಟ್ ಅಕೌಂಟ್, ಪ್ಲಸ್ ಕರೆಂಟ್ ಅಕೌಂಟ್, ಪ್ರೀಮಿಯಂ ಕರೆಂಟ್ ಅಕೌಂಟ್, ರೆಗ್ಯುಲರ್ ಕರೆಂಟ್ ಅಕೌಂಟ್ ಸೇರಿದಂತೆ ವಿವಿಧ ರೀತಿಯ ಖಾತೆಗಳಿಗೆ ಶುಲ್ಕವನ್ನು ಪರಿಷ್ಕರಿಸಲಾಗಿದೆ.
ವಾಣಿಜ್ಯ ಕರೆಂಟ್ ಖಾತೆ, ವೃತ್ತಿಪರ ಕರೆಂಟ್ ಅಕೌಂಟ್, ಅಗ್ರಿ ಕರೆಂಟ್ ಅಕೌಂಟ್, ಟ್ರೇಡ್ ಕರೆಂಟ್ ಅಕೌಂಟ್, ಫ್ಲೆಕ್ಸಿ ಕರೆಂಟ್ ಅಕೌಂಟ್, ಹಾಸ್ಪಿಟಲ್ಸ್/ನರ್ಸಿಂಗ್ ಹೋಮ್ಗಳಿಗೆ ಚಾಲ್ತಿ ಖಾತೆ, ಮರ್ಚೆಂಟ್ ಅಡ್ವಾಂಟೇಜ್ ಕರೆಂಟ್ ಅಕೌಂಟ್, ಮರ್ಚೆಂಟ್ ಅಡ್ವಾಂಟೇಜ್ ಪ್ಲಸ್ ಕರೆಂಟ್ ಅಕೌಂಟ್, ಅಪೆಕ್ಸ್ ಕರೆಂಟ್ ಅಕೌಂಟ್, ಅಲ್ಟಿಮಾ ಚಾಲ್ತಿ ಖಾತೆ ಮತ್ತು ಮ್ಯಾಕ್ಸ್ ಚಾಲ್ತಿ ಖಾತೆಗಳಿಗೂ ಇದು ಅನ್ವಯ ಆಗಲಿದೆ.