ನೆಹರೂ ಕಾಲದಲ್ಲಿ ಇದ್ದ ಕಾಂಗ್ರೆಸ್ ಈಗಿಲ್ಲ. ಮಾನ – ಮರ್ಯಾದೆ ಅನ್ನೋದು ಇದ್ದರೆ ಈಗಿರುವ ಕಾಂಗ್ರೆಸ್ ಬಾಗಿಲನ್ನು ಮುಚ್ಚಿ. ಹೊಸ ಕಾಂಗ್ರೆಸ್ ಸ್ಥಾಪನೆ ಮಾಡಿ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದ್ದಾರೆ.
ಹಾಸನದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಕೋಮುವಾದಿ ಜೊತೆ ಹೋಗಲ್ಲ ಎಂದು ಹೇಳಿ ಮಂಡ್ಯದಲ್ಲಿ ಕುಮಾರಣ್ಣ ಮಗನನ್ನು ತೆಗೆದರು. ತುಮಕೂರಿನಲ್ಲಿ ಕೋಮುವಾದಿ ಪಕ್ಷದ ಜೊತೆ ಸೇರಿ ದೇವೇಗೌಡರನ್ನು ಸೋಲಿಸಿದರು ಎಂದು ಕಿಡಿಕಾರಿದ್ರು.
ಕಾಂಗ್ರೆಸ್ನವರು ಮಲ್ಲಿಕಾರ್ಜುನ ಖರ್ಗೆಗೆ ಎಂತಾ ಸ್ಥಿತಿ ತಂದುಬಿಟ್ಟರು. ಕಾಂಗ್ರೆಸ್ನವರು ಕಾಂಗ್ರೆಸ್ನವರನ್ನೇ ಸೋಲಿಸುತ್ತಾರೆ. 2023ರಲ್ಲೂ ಕಾಂಗ್ರೆಸ್ನವರನ್ನು ಕಾಂಗ್ರೆಸ್ನವರೇ ಸೋಲಿಸುತ್ತಾರೆ. ಕೋಮುವಾದವನ್ನು ವಿರೋಧಿಸುವವರು ಕೋಮುವಾದಿ ಪಕ್ಷಕ್ಕೆ ಏಕೆ ಸೇರ್ಪಡೆಯಾಗ್ತಾರೆ..? ಅಲ್ಲಿ ಕೋಮುವಾದ ಅಂತಾರೆ. ಇಲ್ಲಿ ಪ್ರಾದೇಶಿಕ ಹಾಗೂ ಕೋಮುವಾದ ಪಕ್ಷಗಳೆರಡರ ಬಾಗಿಲನ್ನೂ ತಟ್ಟುತ್ತಾರೆ. ಕಾಂಗ್ರೆಸ್ಗೆ ಇಂತಹ ಸ್ಥಿತಿ ಬಂತಲ್ಲಪ್ಪ ಎಂಬ ವ್ಯಥೆ ಇದೆ ನನಗೆ ಎಂದು ವ್ಯಂಗ್ಯವಾಡಿದ್ರು.