ಬೆಂಗಳೂರು: ಬೆಂಗಳೂರಿನ ಸಿಐಡಿ ಕಚೇರಿಯಲ್ಲಿರುವ ಪುತ್ರರಿಗೆ ಶಾಸಕ ಹೆಚ್.ಡಿ. ರೇವಣ್ಣ ಅವರು ಬಟ್ಟೆ, ಊಟ ತಂದು ಕೊಟ್ಟಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಂಧಿತರಾಗಿದ್ದಾರೆ. ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಬಂಧಿತರಾಗಿದ್ದಾರೆ. ಅವರಿಗೆ ಊಟ. ಬಟ್ಟೆಯನ್ನು ರೇವಣ್ಣ ತಂದುಕೊಟ್ಟಿದ್ದಾರೆ.
ಕಾರ್ ನಲ್ಲಿ ಸಿಐಡಿ ಕಚೇರಿಗೆ ಆಗಮಿಸಿದ ರೇವಣ್ಣ ಕಚೇರಿ ಹೊರಬಾಗದಿಂದಲೇ ಪೊಲೀಸರಿಗೆ ಬ್ಯಾಗ್ ಕೊಟ್ಟು ತೆರಳಿದ್ದಾರೆ.