ಬೆಂಗಳೂರು: ಪ್ರಜ್ವಲ್, ಸೂರಜ್ ಪ್ರಕರಣದ ಬಗ್ಗೆ ನಾನು ಏನೂ ಹೇಳುವುದಿಲ್ಲ. ಕಾನೂನು, ನ್ಯಾಯಾಂಗದ ಮೇಲೆ ನನಗೆ ಗೌರವ ಇದೆ ಎಂದು ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಾವುದೇ ವಿಷಯವಿದ್ದರೂ ನ್ಯಾಯಾಂಗ, ದೇವರ ಮೇಲೆ ನಂಬಿಕೆ ಇದೆ. ಪ್ರಕರಣ ಕೋರ್ಟ್ ನಲ್ಲಿ ಇರುವಾಗ ನಾನು ಮಾತನಾಡುವುದಿಲ್ಲ. ಮಾಜಿ ಶಾಸಕ ಪ್ರೀತಂ ಗೌಡ ಷಡ್ಯಂತ್ರದ ಬಗ್ಗೆಯೂ ಮಾತನಾಡುವುದಿಲ್ಲ. ನಾನು ನಿವೃತ್ತಿಯಾಗುವ ಪ್ರಶ್ನೆಯೇ ಇಲ್ಲ, ಕಾಲವೇ ಉತ್ತರಿಸುತ್ತದೆ ಎಂದು ಹೇಳಿದ್ದಾರೆ.
ಡಿ.ಕೆ. ಶಿಕುಮಾರ್ ಗೆ ಸಿಎಂ ಸ್ಥಾನ ನೀಡಬೇಕೆಂದು ಸ್ವಾಮೀಜಿ ಮನವಿ ಮಾಡಿದ ವಿಚಾರ ನನಗೆ ಗೊತ್ತಿಲ್ಲ. ಅದೆಲ್ಲ, ದೊಡ್ಡವರ ವಿಷಯ. ಮುಖ್ಯಮಂತ್ರಿ ವಿಚಾರ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧ ಪಟ್ಟ ವಿಷಯವಾಗಿದೆ. ಸಿಎಂ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ಸಿಎಂ ಹುದ್ದೆ ನಮ್ಮ ಬಳಿ ಇಲ್ಲ. ಅವರು ಏನು ಬೇಕಾದರೂ ಮಾತನಾಡಲಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಚಂದ್ರಶೇಖರ ಸ್ವಾಮೀಜಿ ಯಾವ ಮಟ್ಟದಲ್ಲಿ ಇದ್ದರು. ದೇವೇಗೌಡರ ಬಗ್ಗೆ ಕಳೆದೊಂದು ತಿಂಗಳಿನಿಂದ ಏನೇನು ನಡೆಯುತ್ತಿದೆ. ದೇವೇಗೌಡರ ಬಗ್ಗೆ ಅನುಕಂಪಕ್ಕಾದರೂ ಹೇಳಬಹುದಿತ್ತು ಅಲ್ವಾ? ಮಠಕ್ಕೆ ದೇವೇಗೌಡರು ಏನೆಲ್ಲಾ ಮಾಡಿದ್ದಾರೆ. ನಮಗೆ ಬಿಡಿ, ದೇವೇಗೌಡರ ಬಗ್ಗೆ ಆದರೂ ಮಾತನಾಡಬೇಕಿತ್ತು, ಎಂದು ಹೆಚ್.ಡಿ. ರೇವಣ್ಣ ಹೇಳಿದ್ದಾರೆ.