ನವದೆಹಲಿ: ಬೆಂಗಳೂರು ಕುಡಿಯುವ ನೀರಿನ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ.
ನ್ಯಾಯಾಧೀಕರಣದಿಂದಾಗಿ ಬೆಂಗಳೂರಿಗೆ ನ್ಯಾಯ ದೊರೆತಿಲ್ಲ. ನ್ಯಾಯಾಧೀಕರಣ ಕೊಟ್ಟಿರುವ ತೀರ್ಪು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಟ್ರಿಬ್ಯುನಲ್ ತೀರ್ಪಿನಂತೆ 4.75 ಟಿಎಂಸಿ ನೀರು ಮಾತ್ರ ನೀಡಲಾಗಿದೆ. ಆದರೆ, ಬೆಂಗಳೂರಿನಲ್ಲಿ 1.30 ಕೋಟಿ ಜನ ವಾಸಿಸುತ್ತಿದ್ದಾರೆ. ಈ ನೀರು ಬೆಂಗಳೂರು ನಗರಕ್ಕೆ ಸಾಕಾಗುವುದಿಲ್ಲ. ಕುಡಿಯುವ ನೀರಿಗೂ ಭಿಕ್ಷೆ ಬೇಡುವ ಪರಿಸ್ಥಿತಿ ಬಂದೊದಗಿದೆ ಎಂದರು.
ಬೆಂಗಳೂರು ನಗರಕ್ಕೆ ಕುಡಿಯಲು ನೀರು ಕೊಡಿ ಅಷ್ಟೇ ಸಾಕು. ಕರ್ನಾಟಕ ಸೇರಿ ಇತರೆ ಮೂರು ರಾಜ್ಯಗಳಿಂದ ವರದಿಯನ್ನು ತರಿಸಿಕೊಳ್ಳಿ. ಕೇಂದ್ರ ಸರ್ಕಾರ ಒಂದು ತಂಡವನ್ನು ಕಳುಹಿಸಿ ವರದಿಯನ್ನು ತರಿಸಿಕೊಳ್ಳಲಿ. ಪಕ್ಷಬೇಧ ಮರೆತು ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಬೇಕಿದೆ ಎಂದು ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಸಲಹೆ ನೀಡಿದ್ದಾರೆ.