
ಬೆಂಗಳೂರು: ಶಾಸಕ ಜಿ.ಟಿ. ದೇವೇಗೌಡರೊಂದಿಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ನಡೆಸಿದ ಸಂಧಾನ ಯಶಸ್ವಿಯಾಗಿದೆ.
ಜಿ.ಟಿ. ದೇವೇಗೌಡರ ನಿವಾಸಕ್ಕೆ ಇಂದು ಹೆಚ್.ಡಿ. ದೇವೇಗೌಡರು ಭೇಟಿ ನೀಡಲಿದ್ದಾರೆ. ಜಿ.ಟಿ. ದೇವೇಗೌಡ ಜೆಡಿಎಸ್ ನಲ್ಲೇ ಉಳಿಯಲಿದ್ದಾರೆ.
ಜಿ.ಟಿ. ದೇವೇಗೌಡರ ಬೇಡಿಕೆಗೆ ಹೆಚ್.ಡಿ. ದೇವೇಗೌಡರು ಒಪ್ಪಿಗೆ ಸೂಚಿಸಿದ್ದು, ಹುಣಸೂರು ಕ್ಷೇತ್ರದಿಂದ ಅವರ ಪುತ್ರನಿಗೆ ಟಿಕೆಟ್ ನೀಡಲಾಗುವುದು. ಹೀಗಾಗಿ ಮೈಸೂರು ಭಾಗದಲ್ಲಿ ಜೆಡಿಎಸ್ ಗೆಲುವಿಗೆ ಅನುಕೂಲವಾಗಿದೆ ಎನ್ನಲಾಗಿದೆ.