ಹಾವೇರಿ: ಮಹಿಳೆಯೊಬ್ಬಳು ಪ್ರಿಯಕರನನ್ನೇ ಕೊಲೆಮಾಡಿ ಪೊಲೀಸರ ಅತಿಥಿಯಾಗಿದ್ದಾಳೆ. ಧಾರವಾಡದ ನಾಗರಾಜ(28) ಕೊಲೆಯಾದ ಯುವಕ ಎಂದು ಹೇಳಲಾಗಿದೆ.
ಮಹಿಳೆಯ ಸಹವಾಸ ಮಾಡಿದ್ದ ನಾಗರಾಜ ಆಕೆಯಿಂದಲೇ ಕೊಲೆಯಾಗಿದ್ದಾನೆ. ಗಂಡ ಜೈಲಿಗೆ ಹೋದ ನಂತರ ಯುವಕನೊಂದಿಗೆ ಲವ್ವಿಡವ್ವಿ ಶುರುಮಾಡಿದ್ದ ಮಹಿಳೆ, ತನ್ನನ್ನು ಬಿಟ್ಟು ಬೇರೆ ಯುವತಿ ಮದುವೆಯಾಗಲು ಮುಂದಾಗಿದ್ದ ಯುವಕ ನಾಗರಾಜನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.
ಧಾರವಾಡದ ಶೋಭಾ ಎಂಬಾಕೆಯೇ ಕೃತ್ಯವೆಸಗಿದ ಆರೋಪಿಯಾಗಿದ್ದಾಳೆ. ಮೊದಲೇ ಮದುವೆಯಾಗಿ ಹೆಣ್ಣು ಮಗುವಿದ್ದ ಶೋಭಾ ಗಂಡನನ್ನು ಬಿಟ್ಟು ಮತ್ತೊಂದು ಮದುವೆಯಾಗಿದ್ದಳು. ಆತ ಜೈಲಿಗೆ ಹೋಗುತ್ತಿದ್ದಂತೆ ಯುವಕ ನಾಗರಾಜನೊಂದಿಗೆ ಸಂಬಂಧ ಬೆಳೆಸಿದ್ದಳು. ಆದರೆ, ಇತ್ತೀಚೆಗೆ ನಾಗರಾಜನಿಗೆ ಮದುವೆ ಫಿಕ್ಸ್ ಆಗಿತ್ತು.
ನಾಗರಾಜನನ್ನು ಕರೆದುಕೊಂಡು ಹುಬ್ಬಳ್ಳಿಯಿಂದ ಲಾರಿಯಲ್ಲಿ ಬಂದಿದ್ದ ಶೋಭಾ ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲಾರಿ ನಿಲ್ಲಿಸಿದ್ದ ಸಂದರ್ಭದಲ್ಲಿ ಜಗಳವಾಡಿದ್ದಾಳೆ. ನಂತರ ವೇಲ್ ನಿಂದ ಕುತ್ತಿಗೆ ಬಿಗಿದು ನಾಗರಾಜನನ್ನು ಕೊಲೆ ಮಾಡಿ ಪರಾರಿಯಾಗಿದ್ದಾಳೆ. ಅಪರಿಚಿತ ಶವ ಪತ್ತೆಯಾಗಿದ್ದರಿಂದ ಪರಿಶೀಲಿಸಿ ತನಿಖೆ ಕೈಗೊಂಡ ಬ್ಯಾಡಗಿ ಪೊಲೀಸರು ವಿಳಾಸದ ಪತ್ತೆ ಮಾಡಿ ಮೃತಪಟ್ಟ ನಾಗರಾಜನ ಮಾಹಿತಿ ಕಲೆಹಾಕಿದ್ದಾರೆ. ನಂತರ ಶೋಭಾಳನ್ನು ವಿಚಾರಣೆ ನಡೆಸಿದಾಗ. ಕೊಲೆ ವಿಚಾರ ಗೊತ್ತಾಗಿದೆ. ಆರೋಪಿ ಶೋಭಾಳನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.