..!ಹಾವೇರಿ : ಹಾವೇರಿಯಲ್ಲಿ ನಿನ್ನೆ ನಡೆದ ಭೀಕರ ಅಪಘಾತಕ್ಕೆ ಒಂದೇ ಕುಟುಂಬದ 13 ಮಂದಿ ಮೃತಪಟ್ಟಿದ್ದು, ದಾರುಣ ಘಟನೆಗೆ ಜನರು ಮಮ್ಮಲ ಮರುಗಿದ್ದಾರೆ.
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಬೆಂಗಳೂರು -ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 13 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿಯ ರಭಸಕ್ಕೆ 7 ಮಹಿಳೆಯರು ಸೇರಿ 13 ಜನ ಸಾವನ್ನಪ್ಪಿದ್ದಾರೆ.
ಹೊಸ ಟಿಟಿ ಖರೀದಿ
ಟಿಟಿ ವಾಹವನ್ನು ಕುಟುಂಬ 15 ದಿನಗಳ ಹಿಂದೆಯಷ್ಟೇ ಖದೀರಿಸಲಾಗಿತ್ತು, ಸೆಕೆಂಡ್ ಹ್ಯಾಂಡ್ ಟೆಂಪೊ ಟ್ರಾಕ್ಸ್ ವಾಹನವನ್ನು ಕುಟುಂಬ ಖರೀದಿ ಮಾಡಿತ್ತು. ವಾಹನದ ಪೂಜೆಗಾಗಿ ಕುಟುಂಬ ಮನೆ ದೇವರು ಯಲ್ಲಮ ದೇವಾಲಯಕ್ಕೆ ತೆರಳಿದ್ದರು. ವಾಹನಕ್ಕೆ ಪೂಜೆ ಮಾಡಿಸಿಕೊಂಡು ಬರುವಾಗ ಈ ದುರಂತ ಸಂಭವಿಸಿದೆ. ಮೃತಪಟ್ಟರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಬಳಿಯ ಎಮ್ಮಿಹಟ್ಟಿ ಗ್ರಾಮದವರು. ನಿನ್ನೆ ಮಹಾರಾಷ್ಟ್ರ ತಿವಾರಿ ಲಕ್ಷ್ಮೀ ಟೆಂಪಲ್ ನಲ್ಲಿ ವಾಹನ ಪೂಜೆ ಮಾಡಿಸಿದ ಕುಟುಂಬ ಫೋಟೋಗಳನ್ನು ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿತ್ತು.