
ಹಾವೇರಿ: ಕಾರಿನ ಗಾಜು ಒಡೆದು ಕೆಲವೇ ಸೆಕೆಂಡ್ ಗಳಲ್ಲಿ 33 ಲಕ್ಷ ದರೋಡೆ ಮಾಡಿದ್ದ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಹಾವೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಎ.ಜಗದೀಶ್ (28) ಬಂಧಿತ ಆರೋಪಿ. ಆಂಧ್ರಪ್ರದೇಶ ಮೂಲದವನು. ನಾಲ್ಕು ದಿನಗಳ ಹಿಂದೆ ಸಿವಿಲ್ ಕಾಂಟ್ರ್ಯಾಕ್ಟರ್ ಸಂತೋಷ್ ಎಂಬುವವರ ಕಾರಿನ ಗಾಜು ಒಡೆದು 33 ಲಕ್ಷ ರೂಪಾಯಿ ಹಣ ದೋಚಿ ಆರೋಪಿಗಳು ಎಸ್ಕೇಪ್ ಆಗಿದ್ದರು. ಕಳ್ಳರ ಕೈಚಳಕದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಸದ್ಯ ಓರ್ವ ಆರೋಪಿಯನ್ನು ಬಂಧಿಸಿಲಾಗಿದ್ದು, ಆತನಿಂದ 30 ಲಕ್ಷ ನಗದು ಹಣ ವಶಕ್ಕೆ ಪಡೆಯಲಾಗಿದೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.