ಹಾವೇರಿ: ‘ಯರಿ ದೊರೆ ಅಕ್ಕತಲೆ, ದೈವ ದರ್ಬಾರ ಅಕ್ಕತಲೆ ಪರಾಕ್’ ಎಂದು ಮಾಲತೇಶ ದೇವರ ಕಾರಣಿಕ ನುಡಿಯನ್ನು ಗೊರವಯ್ಯ ನುಡಿದಿದ್ದಾರೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ವರ್ಷದ ಭವಿಷ್ಯ ವಾಣಿ ಎಂದೇ ನಂಬಿರುವ ಕಾರಣಿಕ ವಾಣಿಯನ್ನು ಗೊರವಯ್ಯ ನುಡಿದರು.
ಪಕ್ಷೇತರರ ಸಹಕಾರದಿಂದ ಮುಂದಿನ ರಾಜಕೀಯ ಭವಿಷ್ಯ ಇರುತ್ತದೆ. ದೇವರಿಗೆ ಪ್ರೀತಿ ಆದಂತಹ ಆಡಳಿತವನ್ನು ಮುಂದಿನ ಸರ್ಕಾರಗಳು ಕೊಡುತ್ತವೆ ಎಂದು ರಾಜಕೀಯವಾಗಿ ಕಾರಣಿಕವನ್ನು ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ್ ಭಟ್ ವಿಶ್ಲೇಷಿಸಿದ್ದಾರೆ.
ಉತ್ತಮ ಫಸಲು ಬಂಧು ರೈತರ ಬದುಕು ಸಮೃದ್ಧವಾಗುತ್ತದೆ. ಕೊರೋನಾ ಮೂರನೇ ಅಲೆ ಬರದಂತೆ ಜನರ ಮೇಲೆ ರೋಗ-ರುಜಿನ ಬರದಂತೆ ಜನರ ಮೇಲೆ ದೈವಕೃಪೆ ಇರಲಿದೆ ಎಂದು ವಿಶ್ಲೇಷಿಸಿದ್ದಾರೆ.
21 ಅಡಿ ಬಿಲ್ಲನ್ನೇರಿ ಗೊರವಯ್ಯ ಗೊರವಯ್ಯ ನಾಗಪ್ಪ ಕಾರ್ಣಿಕ ನುಡಿದಿದ್ದಾರೆ. ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ವರ್ಷದ ಭವಿಷ್ಯವಾಣಿ ಕಾರಣಿಕ ನುಡಿಯುತ್ತಾರೆ.