![](https://kannadadunia.com/wp-content/uploads/2023/01/istock000046370690medium.jpg)
ತುರ್ವಿಹಾಳ : ಕರ್ತವ್ಯದಲ್ಲಿದ್ದ ವೇಳೆಯೇ ಹೃದಯಾಘಾತವಾಗಿ ಮುಖ್ಯ ಶಿಕ್ಷಕರೊಬ್ಬರು ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.
ಹಾವೇರಿಯ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹರಣಿ ಗ್ರಾಮದ ಸೂರ್ಯ ಉಮಾಯಪ್ಪ ಜಾಡರ್ ಮೃತ ಶಿಕ್ಷಕರು. ತುರ್ವಿಹಾಳ ಸಮೀಪದ ಗದ್ರಟಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಬೆಳಗ್ಗೆ11.50 ರ ಸುಮಾರಿಗೆ ಹೃದಯಾಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಮಂಗಳವಾರ ಬೆಳಗ್ಗೆ ಮಕ್ಕಳ ಹಾಜರಾತಿ ತೆಗೆದುಕೊಂಡು ಶಾಲೆಯ ಕಾರ್ಯಾಲಯದಲ್ಲಿ ಕುಳಿತಿದ್ದ ವೇಳೆ ದಿಢೀರ್ ಕುಸಿದುಬಿದ್ದು ಸೂರ್ಯ ಉಮಾಯಪ್ಪ ಜಾಡರ್ ಮೃತಪಟ್ಟಿದಾರೆ.