ಹಾವೇರಿ: ನದಿಗೆ ಬಿದ್ದಿದ್ದ ವೃದ್ಧೆಯನ್ನು ರಕ್ಷಿಸಲು ಬಸ್ ಚಾಲಕ ನದಿಗೆ ಹಾರಿದ ಘಟನೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಮಾಸೂರು ಬಳಿ ನಡೆದಿದೆ.
ಸರ್ಕಾರಿ ಬಸ್ ಚಾಲಕ ಮುಜೀದ್ ಗುಬ್ಬಿ ಅವರು ಜೀವದ ಹಂಗು ತೊರೆದು ನದಿಗೆ ಹಾರಿದ್ದಾರೆ. ಮಾಸೂರಿನಲ್ಲಿ ಕಾಲು ಜಾರಿದ ವೃದ್ಧೆ ಕುಮದ್ವತಿ ನದಿಗೆ ಬೀಳುವುದನ್ನು ಗಮನಿಸಿದ ಮುಜೀದ್ ಕೂಡಲೇ ಬಸ್ ನಿಲ್ಲಿಸಿ ರಕ್ಷಣೆಗಾಗಿ ನದಿಗೆ ಹಾರಿದ್ದಾರೆ. ಆದರೆ ಅವರನ್ನು ರಕ್ಷಿಸುವಷ್ಟರಲ್ಲಿ ನೀರು ಕುಡಿದು ಉಸಿರು ಗಟ್ಟಿ ವೃದ್ಧೆ ಸಾವನ್ನಪ್ಪಿದ್ದಾರೆ. ವೃದ್ಧೆಯ ಶವವನ್ನು ಚಾಲಕ ಮುಜೀದ್ ಗುಬ್ಬಿ ಹೊರ ತೆಗೆದಿದ್ದಾರೆ. ಅವರು ಹಿರೇಕೆರೂರು ಡಿಪೋ ಬಸ್ ಚಾಲಕರಾಗಿದ್ದಾರೆ. ಅವರ ಸಾಹಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಿರೇಕೆರೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.