ಹಿಂದಿ ರಾಷ್ಟ್ರಭಾಷೆಯಲ್ಲ ಎಂಬ ದನಿ ದೊಡ್ಡದಾಗುತ್ತಿದೆ, ನಟ ಸುದೀಪ್ ನೀಡಿದ ಖಡಕ್ ಅಭಿಪ್ರಾಯ ದೇಶದಲ್ಲೇ ಸದ್ದು ಮಾಡುತ್ತಿದೆ. ಇದೇ ವೇಳೆ ರಾಜಕೀಯ ನಾಯಕರ ಅಭಿಪ್ರಾಯ ಕೇಳುವ ತವಕ ಅನೇಕರಿಗಿರುತ್ತದೆ. ಅವರು ಹೌದು ಎಂದರೂ ತಪ್ಪು, ಇಲ್ಲ ಎಂದರೂ ತಪ್ಪು, ರಾಜಕೀಯವಾಗಿ ಪರಿಣಾಮ ಬೀರಲಿದೆ.
ಅಂಥದ್ದರಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಬೆಂಗಳೂರಲ್ಲಿ ತಮ್ಮ ಅಭಿಪ್ರಾಯ ನೀಡಿದ್ದಾರೆ. ಹಿಂದಿ ರಾಷ್ಟ್ರೀಯ ಭಾಷೆ ಎಂದು ಕೇಂದ್ರ ಸರ್ಕಾರ ಎಲ್ಲಿಯೂ ಹೇಳಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಾವು ಹಿಂದಿ ಹೇರಲು ಪ್ರಯತ್ನಿಸುತ್ತಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿಯೂ ಪ್ರಾದೇಶಿಕ ಭಾಷೆಗಳಿಗೆ ಪ್ರಾಮುಖ್ಯತೆ ನೀಡಿದ್ದೇವೆ. ಯಾರೂ ಯಾರ ಮೇಲೂ ಯಾವುದೇ ಭಾಷೆಯನ್ನು ಹೇರುವಂತಿಲ್ಲ ಎಂದರು.
ಬಿರುಬಿಸಿಲಿನಲ್ಲೂ ಮದುವೆ ಮೆರವಣಿಗೆ ನಡೆಸಲು ಸಖತ್ ಪ್ಲಾನ್
ಹಿಂದಿಯ ವಿಷಯವಾಗಿ ಬಾಲಿವುಡ್ ನಟ ದೇವಗನ್ ಹೇಳಿದ ಹಾಗೂ ಸುದೀಪ್ ನಡುವೆ ನಡೆದ ಟಗ್ ಆಫ್ ವಾರ್ ನಡೆದಿದ್ದು ದೇಶದ ಗಮನ ಸೆಳೆದಿದೆ. ಸುದೀಪ್ ಹೇಳಿದ್ದು ಸರಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಭಾಷಾವಾರು ರಾಜ್ಯಗಳ ಮರು ಹಂಚಿಕೆಯ ನಂತರ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆ ಮುಖ್ಯವಾಗುತ್ತದೆ ಮತ್ತು ರಾಜ್ಯಗಳಲ್ಲಿ ಆ ಭಾಷೆ ಸರ್ವೋಚ್ಚ. ಅದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಮತ್ತು ಗೌರವಿಸಬೇಕು ಎಂದು ಬೊಮ್ಮಾಯಿ ಹೇಳಿದರು.
ಹಿಂದಿ ಎಂದಿಗೂ ನಮ್ಮ ರಾಷ್ಟ್ರ ಭಾಷೆಯಾಗುವುದಿಲ್ಲ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಹೇಳಿದರು.
ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, ಹೆಚ್ಚಿನ ಜನಸಂಖ್ಯೆಯು ಹಿಂದಿ ಮಾತನಾಡುವುದರಿಂದ ಅದು ರಾಷ್ಟ್ರೀಯ ಭಾಷೆಯಾಗುವುದಿಲ್ಲ ಹೇಳಿದರು.