ಮುಖದ ಸೌಂದರ್ಯಕ್ಕೆ ಶುಭ್ರವಾದ ಹಲ್ಲುಗಳೇ ಭೂಷಣ ಎಂದು ಹೇಳಿದ್ರೆ ತಪ್ಪಾಗಲಾರದು. ಆದರೆ ಅನೇಕ ಕಾರಣಗಳಿಂದಾಗಿ ಕೆಲವರ ಹಲ್ಲು ಹಳದಿ ಇಲ್ಲವೇ ಕಂದು ಬಣ್ಣಕ್ಕೆ ತಿರುಗಿರುತ್ತದೆ. ಇದರಿಂದಾಗಿ ಅವರು ಸಾರ್ವಜನಿಕ ಸ್ಥಳಗಳಲ್ಲಿ ಮುಜುಗರಗಳನ್ನ ಎದುರಿಸಬೇಕಾಗಿ ಬರುತ್ತದೆ. ಆದರೆ ಮನೆಯಲ್ಲಿರುವ ಪದಾರ್ಥಗಳ ಸಹಾಯದಿಂದ ನಿಮ್ಮ ಹಲ್ಲುಗಳು ಶ್ವೇತ ವರ್ಣದಿಂದ ಹೊಳೆಯುವಂತೆ ಮಾಡಬಹುದಾಗಿದೆ.
ನಿಮ್ಮ ಹಲ್ಲುಗಳನ್ನ ಶುಭ್ರವಾಗಿ ಇಡಲು ಕೊಬ್ಬರಿ ಎಣ್ಣೆಯನ್ನ ಬಳಕೆ ಮಾಡಬಹುದು. ಇದಕ್ಕಾಗಿ ನೀವು ಒಂದು ಚಮಚ ಕೊಬ್ಬರಿ ಎಣ್ಣೆಯನ್ನ ನಿಮ್ಮ ಬಾಯಿಯಲ್ಲಿ 5 ನಿಮಿಷಗಳ ಕಾಲ ಇಡಬೇಕು. ಇದು ಮಾತ್ರವಲ್ಲದೇ ಟೂತ್ ಬ್ರಶ್ನಲ್ಲಿ ಒಂದೆರಡು ಹನಿ ಕೊಬ್ಬರಿ ಎಣ್ಣೆಯನ್ನ ಹಾಕಿ ಹಲ್ಲನ್ನ ಉಜ್ಜಿಕೊಳ್ಳಲೂಬಹುದು. ಇದಾದ ಬಳಿಕ ಶುದ್ಧವಾದ ನೀರಿನಿಂದ ಬಾಯಿಯನ್ನ ಮುಕ್ಕಳಿಸಿ.
ನಿಂಬೆ ಹಣ್ಣಿನಲ್ಲಿ ವಿಟಾಮಿನ್ ಸಿ ಅಂಶ ಅಗಾಧ ಪ್ರಮಾಣದಲ್ಲಿ ಇರುತ್ತೆ. ನಿಂಬೆ ಹಣ್ಣು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ನಿಂಬೆ ಹಣ್ನಿನ ರಸದ ಜೊತೆಯಲ್ಲಿ ನಿಂಬೆಯ ಸಿಪ್ಪೆ ಕೂಡ ಪ್ರಯೋಜನಕಾರಿಯಾಗಿದೆ. ಈ ನಿಂಬೆ ಹಣ್ಣಿನ ಸಿಪ್ಪೆಯಿಂದ ಹಲ್ಲನ್ನ ಉಜ್ಜಿ ಬಳಿಕ ಬಾಯಿಯನ್ನ ತೊಳೆದುಕೊಂಡಲ್ಲಿ ಕ್ರಮೇಣವಾಗಿ ನಿಮ್ಮ ಹಲ್ಲುಗಳು ಪಕ ಪಕ ಅಂತಾ ಹೊಳೆಯೋದು ಪಕ್ಕಾ.
ನಿಮಗೆ ಸ್ಟ್ರಾಬೆರಿಗಳನ್ನ ತಿನ್ನೋದು ಇಷ್ಟ ಅಂದರೆ ನಿಮಗೊಂದು ಗುಡ್ ನ್ಯೂಸ್ ಕಾದಿದೆ. ಸ್ಟ್ರಾಬೆರಿ ಹಣ್ಣುಗಳನ್ನ ತಿನ್ನೋದು ಹಾಗೂ ಅವುಗಳಿಂದ ಹಲ್ಲನ್ನ ಉಜ್ಜಿಕೊಳ್ಳೋದರಿಂದ ಹಲ್ಲು ಬೆಳ್ಳಗಾಗಲಿದೆ.
ಬೇಕಿಂಗ್ ಸೋಡಾ ಕೂಡ ಮನೆಮದ್ದಾಗಿ ಕಾರ್ಯನಿರ್ವಹಿಸುತ್ತೆ ಅನ್ನೋದನ್ನ ವಿಶೇಷವಾಗಿ ಹೇಳಬೇಕಾಗಿಲ್ಲ. ಇದು ಹಲ್ಲುಗಳ ಬಣ್ಣ ಬದಲಾಯಿಸೋಕೂ ಸಹ ಸಹಾಯ ಮಾಡುತ್ತದೆ. ನಿಮ್ಮ ಹಲ್ಲನ್ನ ಉಜ್ಜಿದ ಬಳಿಕ ಬೇಕಿಂಗ್ ಸೋಡಾ ಮಿಶ್ರಣ ಮಾಡಿದ ನೀರಿನಿಂದ ಬಾಯಿ ತೊಳೆದುಕೊಳ್ಳಿ.