alex Certify ಲಕ್ಕುಂಡಿಯ ವಿಶ್ವೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದೀರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಕ್ಕುಂಡಿಯ ವಿಶ್ವೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದೀರಾ

ಭಾರತ ಹಲವು ಪುರಾತನ ವಾಸ್ತುಶಿಲ್ಪಗಳನ್ನು ಒಳಗೊಂಡ ರಾಷ್ಟ್ರ. ಐತಿಹಾಸಿಕ ಸ್ಥಳಗಳನ್ನು ಅನ್ವೇಷಿಸಲು ಇಷ್ಟಪಡುವವರಿಗೆ ಲಕ್ಕುಂಡಿ ಅತ್ಯುತ್ತಮ ತಾಣ. ಲಕ್ಕುಂಡಿ ಗದಗ ನಗರದಿಂದ 11ಕಿಮೀ ದೂರದಲ್ಲಿದೆ. ಇದನ್ನು ದೇವಾಲಯಗಳ ಸ್ವರ್ಗವೆಂದು ಕರೆಯುತ್ತಾರೆ. ಲೋಹಿಗುಂಡಿ ತದನಂತರದಲ್ಲಿ ಲೋಕಿಗುಂಡಿಯಿಂದ ಈಗಿನ ಲಕ್ಕುಂಡಿಯಾಗಿದೆ.

ಪ್ರತಿ ಶಿಲ್ಪ, ಸ್ತಂಭ ಮತ್ತು ದೇವಸ್ಥಾನದ ಬಗ್ಗೆ ತಿಳಿದುಕೊಳ್ಳಲು ಅತ್ಯಾಕರ್ಷಕವಾದ ಕಥೆ ಇದೆ. ಸುಮಾರು 50 ದೇವಾಲಯಗಳು, 101 ಹಂತದ ಬಾವಿಗಳು ಮತ್ತು 29 ಶಾಸನಗಳನ್ನು ಈ ಪ್ರಶಾಂತ ಹಳ್ಳಿಯಲ್ಲಿ ಸಂರಕ್ಷಿಸಲಾಗಿದೆ.

ಲಕ್ಕುಂಡಿಯ ದೇವಾಲಯಗಳಲ್ಲಿ ಪ್ರಮುಖವಾದುದೆಂದರೆ ಕಾಶಿ ವಿಶ್ವೇಶ್ವರ ದೇವಾಲಯ. ಇದು ದ್ವಿಕೂಟವಾಗಿದ್ದು ಎರಡು ಗರ್ಭಗೃಹ, ಅರ್ಧಮಂಟಪ ಹಾಗೂ ನವರಂಗಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಎತ್ತರವಾದ ಪಾಣಿಪೀಠದ ಮೇಲೆ ಶಿವಲಿಂಗವಿದೆ. ಗರ್ಭಗೃಹದ ದ್ವಾರ ಬಂಧವು ವಿಪುಲವಾದ ಕೆತ್ತನೆಗಳಿಂದ ಕೂಡಿದ್ದು ದ್ವಾರದ ಎರಡೂ ಕಡೆಗಳಲ್ಲಿ ವಾದ್ಯ ವಾದಕರ, ನರ್ತಕಿಯರ ಹಾಗೂ ಶಿಲಾಬಾಲಿಕೆಯರ ಉಬ್ಬು ಶಿಲ್ಪಗಳನ್ನು ಬಿಡಿಸಲಾಗಿದೆ.

ಅರ್ಧಮಂಟಪ ದ್ವಾರದ ಎರಡೂ ಕಡೆಗಳಲ್ಲಿ ಅಲಂಕೃತ ಕಂಬಗಳಿವೆ. ನವರಂಗದಲ್ಲಿ ಪೂರ್ವಕ್ಕೆ ಹಾಗೂ ದಕ್ಷಿಣಕ್ಕೆ ದ್ವಾರಬಂಧಗಳಿರುವ ಎರಡು ಪ್ರವೇಶ ದ್ವಾರಗಳಿವೆ. ಶುಕ್ರವಾರ ಹೊರತುಪಡಿಸಿ ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಭೇಟಿ ನೀಡಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...