ಹಲಸಿನ ಹಣ್ಣಿನಿಂದ ದೋಸೆ, ಇಡ್ಲಿ ಮಾಡಿಕೊಂಡು ಸವಿಯುತ್ತಿರುತ್ತೇವೆ.
ಇಲ್ಲಿ ರುಚಿಕರವಾಗಿ ಹಲಸಿನ ಹಣ್ಣಿನ ಹಲ್ವಾ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
ಹಲಸಿನಹಣ್ಣಿನ ತೊಳೆ – 15, ಬೆಲ್ಲದ ಪುಡಿ – 1 ಕಪ್, ಏಲಕ್ಕಿ ಪುಡಿ – 1/2 ಟೀ ಸ್ಪೂನ್, ತುಪ್ಪ – 2 ಟೀ ಸ್ಪೂನ್, ಗೋಡಂಬಿ -ಸ್ವಲ್ಪ.
ಮಾಡುವ ವಿಧಾನ:
ಮೊದಲಿಗೆ ಹಲಸಿನ ಹಣ್ಣಿನ ತೊಳೆಗಳನ್ನು ಚಿಕ್ಕದ್ದಾಗಿ ಕತ್ತರಿಸಿಕೊಂಡು ಇದಕ್ಕೆ ¼ ಕಪ್ ನೀರು ಸೇರಿಸಿ ಕುಕ್ಕರ್ ನಲ್ಲಿ ಒಂದು ವಿಷಲ್ ಕೂಗಿಸಿಕೊಳ್ಳಿ. ನಂತರ ಗ್ಯಾಸ್ ಆಫ್ ಮಾಡಿ ಇದನ್ನು ತಣ್ಣಗಾಗಲು ಬಿಡಿ. ನಂತರ ಒಂದು ಮಿಕ್ಸಿ ಜಾರಿಗೆ ಸೇರಿಸಿ ನಯವಾಗಿ ರುಬ್ಬಿಕೊಳ್ಳಿ.
ನಂತರ ಒಂದು ಪ್ಯಾನ್ ಗೆ 1 ಕಪ್ ಬೆಲ್ಲದ ಪುಡಿ, ¼ ಕಪ್ ನೀರು ಸೇರಿಸಿ ಕುದಿಸಿ. ಬೆಲ್ಲ ಕರಗಿದ ನಂತರ ಅದಕ್ಕೆ ರುಬ್ಬಿಟ್ಟುಕೊಂಡ ಹಲಸಿನ ಹಣ್ಣಿನ ಮಿಶ್ರಣ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ತುಪ್ಪ ಸೇರಿಸಿ ಈ ಮಿಶ್ರಣ ತಳ ಬಿಡುವವರೆಗೆ ಚೆನ್ನಾಗಿ ಕೈಯಾಡಿಸುತ್ತಾ ಇರಿ. ನಂತರ ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ ಸೇರಿಸಿ ಸರ್ವ್ ಮಾಡಿ.