alex Certify ತುಂತುರು ಮಳೆಯಲ್ಲಿ ಬಿಸಿ ಬಿಸಿ ಚಹಾ-ಪಕೋಡಾ ಸವಿಯಲು ಆರಂಭಿಸಿದ್ದೀರಾ…..? ತಿಳಿದಿರಲಿ ನಿಮಗೆ ಅದರ ಅನಾನುಕೂಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತುಂತುರು ಮಳೆಯಲ್ಲಿ ಬಿಸಿ ಬಿಸಿ ಚಹಾ-ಪಕೋಡಾ ಸವಿಯಲು ಆರಂಭಿಸಿದ್ದೀರಾ…..? ತಿಳಿದಿರಲಿ ನಿಮಗೆ ಅದರ ಅನಾನುಕೂಲ

ತುಂತುರು ಮಳೆ, ಹಿತವಾದ ಗಾಳಿಯಿದ್ದಾಗ ಬಾಲ್ಕನಿಯಲ್ಲಿ ಕುಳಿತು ಬಿಸಿ ಬಿಸಿ ಚಹಾ ಮತ್ತು ಪಕೋಡಾ ಸವಿಯುವುದು ಬಹಳ ಜನರಿಗೆ ಇಷ್ಟವಾದ ಕೆಲಸ. ಜೊತೆಯಲ್ಲಿ ಸಂಗಾತಿ ಅಥವಾ ಸ್ನೇಹಿತರಿದ್ದರೆ ಅದರ ಮಜವೇ ಬೇರೆ. ಚಹಾ ಮತ್ತು ಪಕೋಡಾದ ಸಂಯೋಜನೆ ಬಹಳ ರುಚಿಕರ. ಆದರೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಚಹಾ ಮತ್ತು ಪಕೋಡವನ್ನು ಒಟ್ಟಿಗೆ ತಿನ್ನುವುದರಿಂದ ಅನೇಕ ರೀತಿಯ ಅನಾನುಕೂಲಗಳಾಗುತ್ತವೆ.

ಹೆಚ್ಚಿನ ಕ್ಯಾಲೋರಿ ಮತ್ತು ಕೊಬ್ಬು: ಪಕೋಡಾ ಕರಿಯಲು ಹೆಚ್ಚು ಎಣ್ಣೆ ಬಳಸಲಾಗುತ್ತದೆ. ಹಾಗಾಗಿ ಅವುಗಳಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲೋರಿ ಮತ್ತು ಕೊಬ್ಬು ಇರುತ್ತದೆ. ಮಳೆಗಾಲದಲ್ಲಿ ನಿಯಮಿತವಾಗಿ ಚಹಾದೊಂದಿಗೆ ಪಕೋಡ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ. ಸ್ಥೂಲಕಾಯ ಕೂಡ ಉಂಟಾಗಬಹುದು. ಸ್ಥೂಲಕಾಯತೆಯು ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಅಜೀರ್ಣ:  ಪಕೋಡದಲ್ಲಿ ಎಣ್ಣೆಯ ಪ್ರಮಾಣ ತುಂಬಾ ಹೆಚ್ಚಿರುವುದರಿಂದ ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ. ಚಹಾದಲ್ಲಿರುವ ಕೆಫೀನ್ ಮತ್ತು ಪಕೋಡಾದಲ್ಲಿ ಹೆಚ್ಚಿನ ಪ್ರಮಾಣದ ಎಣ್ಣೆಯು ಹೊಟ್ಟೆಯ ಕಿರಿಕಿರಿ, ಅಜೀರ್ಣ ಮತ್ತು ಆಮ್ಲೀಯತೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.

ಪೋಷಣೆಯ ಕೊರತೆ: ಚಹಾ ಮತ್ತು ಪಕೋಡಾ ಸಮತೋಲಿತ ಆಹಾರದ ಭಾಗವಲ್ಲ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಡಲೆ ಹಿಟ್ಟು, ಆಲೂಗಡ್ಡೆ ಮತ್ತು ಇತರ ತರಕಾರಿಗಳಿರುತ್ತವೆ. ಆದರೆ ಎಣ್ಣೆಯಲ್ಲಿ ಕರಿದಾಗ ಅವುಗಳ ಪೌಷ್ಟಿಕಾಂಶದ ಮೌಲ್ಯವು ಕಡಿಮೆಯಾಗುತ್ತದೆ. ಈ ಆಹಾರ ಸಂಯೋಜನೆಯು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವುದಿಲ್ಲ.

ಕೊಲೆಸ್ಟ್ರಾಲ್ ಹೆಚ್ಚಳ : ಕರಿದ ಪಕೋಡಾ ತಿನ್ನುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಬಹುದು. ಇದು ಹೃದಯ ಸಂಬಂಧಿ ಕಾಯಿಲೆಗಳಿಗೆ ಮುಖ್ಯ ಕಾರಣವಾಗಿದೆ. ನಿಯಮಿತವಾಗಿ ಕರಿದ ಆಹಾರವನ್ನು ಸೇವಿಸುವುದರಿಂದ ಅಪಧಮನಿಗಳಲ್ಲಿ ಪ್ಲೇಕ್ ಸಂಗ್ರಹವಾಗಿ ಇದು ಹೃದಯಾಘಾತ ಮತ್ತು ಪಾರ್ಶ್ವವಾಯುಗಳಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಳ : ಚಹಾದಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಇರುತ್ತದೆ. ಪಕೋಡಾಗಳಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟ್‌ಗಳಿರುತ್ತವೆ. ಇವೆರಡೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸಬಲ್ಲವು. ಹಾಗಾಗಿ ಇವು ಸಕ್ಕರೆ ಕಾಯಿಲೆ ಇರುವವರಿಗೆ ಹಾನಿಕಾರಕ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...