ನೋಡುವುದಕ್ಕೆ ಇದು ಸಾಮಾನ್ಯವಾದ ವಿಡಿಯೋ…… ಯುವಕನೊಬ್ಬ ಡಾನ್ಸ್ ಮಾಡುತ್ತಿರುವಂತೆ ಕಾಣಿಸುತ್ತೆ. ಆದರೆ ನೀವು ಇದೇ ವಿಡಿಯೋವನ್ನ ಕೊಂಚ ಗಮನ ಇಟ್ಟು ನೋಡಿ ಕನ್ಫ್ಯೂಸ್ ಆಗಿ ಬಿಡ್ತಿರಾ. ಅದೇ ನೋಡಿ ಈ ವಿಡಿಯೋ ಅಸಲಿ ಮ್ಯಾಜಿಕ್.
ಮೊದಲಿಗೆ ಈ ವಿಡಿಯೋ ನೋಡ್ತಿದ್ದ ಹಾಗೆ, ಐವರು ನಿಂತು ಡಾನ್ಸ್ ಮಾಡ್ತಿರುವ ಹಾಗೆ ಕಾಣಿಸುತ್ತೆ. ಹೀಗೆ ಡಾನ್ಸ್ ಮಾಡ್ತಿರೋದು ಒಬ್ಬರಾ? ಅಥವಾ ಐದು ಜನರಾ ಅನ್ನೋದು ತಕ್ಷಣವೇ ಗೊತ್ತಾಗೊಲ್ಲ. ಇನ್ನೂ ಈ ವಿಡಿಯೋದಲ್ಲಿ ಹಾಡಿನ ಸ್ಟೆಪ್ ಬದಲಾಗ್ತಾ ಇದ್ದ ಹಾಗೆಯೇ ಯುವಕ ಹಾಕಿರುವ ಹೂಡೀ ಅಂದರೆ ಮೇಲಂಗಿಯ ಬಣ್ಣ ಬದಲಾಗುತ್ತೆ. ಅದ್ಹೇಗೆ ಸಾಧ್ಯ ಅನ್ನೋದು ಯಾರಿಗೂ ಗೊತ್ತಾಗೊಲ್ಲ. ಈ ವಿಡಿಯೋ ನೋಡಿದವರೆಲ್ಲ ಈಗ ಫುಲ್ ಕನ್ಫ್ಯೂಸ್ ಆಗಿ ಬಿಟ್ಟಿದ್ದಾರೆ.
ಈ ವಿಡಿಯೋದಲ್ಲಿ ಹೀಗೆ ಡಾನ್ಸ್ ಮಾಡ್ತಿರೋರು ಮಿಸ್ಟರ್ ಕ್ರಿಸ್ಟಿಯನ್ ಕೆಸಲಿನ್ ಅನ್ನೊ ಯುವಕ. ಇವರು ಐದು ಬಣ್ಣದ ಮೇಲಂಗಿ ಹಾಕಿಕೊಂಡು ಒಂದೇ ಹಾಡಿಗೆ ಪದೇ ಪದೇ ಡಾನ್ಸ್ ಮಾಡಿ ಕೊನೆಗೆ ಎಡಿಟ್ ಮಾಡಿ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಆಪ್ಟಿಕಲ್ ಇಲ್ಯೂಶನ್ ಅಂದರೆ ಕಣ್ಣು ನೋಡಿದ್ದನ್ನ ಮೆದುಳು ತಕ್ಷಣವೇ ಒಪ್ಪಿಕೊಳ್ಳದೇ ಇರೋ ಸ್ಥಿತಿ. ಇದೇ ಟ್ರಿಕ್ನಿಂದಾಗಿ ಕ್ರಿಸ್ಟಿಯನ್ ಮಾಡಿರೋ ಡಾನ್ಸ್ ಇಲ್ಲಿ ಮ್ಯಾಜಿಕ್ನಂತೆ ವರ್ಕೌಟ್ ಆಗಿದೆ.
ಫ್ಯಾಕ್ಟ್ಸ್ ಡೇಲಿ ಅನ್ನೊ ಅಕೌಂಟ್ನಲ್ಲಿ ಪೋಸ್ಟ್ ಮಾಡಲಾಗಿರುವ ಈ ವಿಡಿಯೋವನ್ನ ಈಗಾಗಲೇ 5 ಕೋಟಿಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಈ ವಿಡಿಯೋ ನೋಡಿದವರೆಲ್ಲರೂ ಈತ ಹಾಕಿರುವ ಬಟ್ಟೆಯ ಬಣ್ಣ ಬದಲಾಗಿದ್ದು ಹೇಗೆ? ಈತ ಒಬ್ಬನೇನಾ ಅಥವಾ ಒಬ್ಬರಂತೆಯೇ ಕಾಣೋ ಐವರು ಜನರಾ ಅನ್ನೊದೇ ಎಲ್ಲರಿಗೂ ಕಾಡ್ತಿರುವ ಪ್ರಶ್ನೆ.
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಯುವಕರು ಹೊಸ ಹೊಸ ಬಗೆಯ ಪ್ರಯತ್ನ ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ತಮ್ಮ ಟ್ಯಾಲೆಂಟ್ನ್ನ ತೋರಿಸುವುದಕ್ಕೆ ಸೋಶಿಯಲ್ ಮೀಡಿಯಾ ವೇದಿಕೆಯಂತೆ ಬಳಸುತ್ತಿದ್ದಾರೆ. ಅದರಲ್ಲಿ ಕ್ರಿಸ್ಟಿಯನ್ ಕೆಸಲಿನ್ ಕೂಡಾ ಒಬ್ಬರು.
ಈಗ ಇವರು ಮಾಡಿರುವ ಈ ವಿಡಿಯೋ ನೋಡಿ ನೆಟ್ಟಿಗರು ಕೊಂಚ ಕನ್ಫ್ಯೂಸ್ ಆಗಿದ್ದರೂ ಮುಂದಿನ ದಿನಗಳಲ್ಲಿ ಈ ರೀತಿಯ ಇನ್ನೂ ಕೆಲ ವಿಡಿಯೋಗಳು ನೋಡಲು ಉತ್ಸುಕರಾಗಿದ್ದಾರೆ ಅನ್ನೋದು ಅವರು ಕಾಮೆಂಟ್ ಬಾಕ್ಸ್ನಲ್ಲಿ ಹಾಕಿರುವ ಕಾಮೆಂಟ್ನಿಂದ ಸ್ಪಷ್ಟವಾಗಿ ಗೊತ್ತಾಗುತ್ತಿದೆ.