alex Certify ನೋಡಿದ್ದೀರಾ ಮಂಜರಾಬಾದ್​ ಕೋಟೆ ಸೌಂದರ್ಯ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡಿದ್ದೀರಾ ಮಂಜರಾಬಾದ್​ ಕೋಟೆ ಸೌಂದರ್ಯ…..?

ಕೋಟೆಗಳು ಅಂದರೆ ನಿಮ್ಮ ತಲೆಯಲ್ಲಿ ಎತ್ತರವಾದ ಗೋಡೆಗಳನ್ನ ಹೊಂದಿರುವ ವೃತ್ತಾಕಾರದ ಇಲ್ಲವೇ ಚೌಕಾಕಾರದ ಪುರಾತನ ಕಟ್ಟಡ ನೆನಪಿಗೆ ಬರಬಹುದು. ಆದರೆ ಹಾಸನದ ಸಕಲೇಶಪುರದಲ್ಲಿರುವ ಈ ಮಂಜರಾಬಾದ್​ ಕೋಟೆ ತನ್ನ ವಿಭಿನ್ನ ವಿನ್ಯಾಸದ ಮೂಲಕವೇ ಪ್ರವಾಸಿಗರನ್ನ ತನ್ನತ್ತ ಕೈ ಬೀಸಿ ಕರೆಯುತ್ತಿದೆ.

ಟಿಪ್ಪು ಸುಲ್ತಾನ್​ ಕಾಲದಲ್ಲಿ ನಿರ್ಮಾಣವಾದ ಈ ಕೋಟೆ 8 ಮೂಲೆಯನ್ನ ಹೊಂದಿರುವ ನಕ್ಷತ್ರಾಕಾರದ ಕೋಟೆಯಾಗಿದೆ. ಇದನ್ನ ಭಾರತದಲ್ಲಿರುವ ಸಂಪೂರ್ಣವಾದ ವೌಬನೆಸ್ಕ್​ ನಕ್ಷತ್ರಾಕಾರದ ಕೋಟೆ ಅಂತಾನೂ ಕರೀತಾರೆ. ಗ್ರೈನೈಟ್​, ಹಾಗೂ ಇಟ್ಟಿಗೆಗಳನ್ನ ಬಳಸಿ ಈ ಕೋಟೆಯನ್ನ ನಿರ್ಮಾಣ ಮಾಡಲಾಗಿದೆ. ಈ ಕೋಟೆಯಲ್ಲಿ ಶಸ್ತ್ರಾಸ್ತ್ರ ಸಂಗ್ರಹಾಲಯ, ಒಳಾಂಗಣ ಕಟ್ಟಡ, ಮಳಿಗೆ ಸೇರಿದಂತೆ ಇನ್ನೂ ಅನೇಕ ಹಂತಗಳನ್ನ ಹೊಂದಿದೆ.

ಈ ಕೋಟೆಯಲ್ಲಿ ನೆಲಮಾಳಿಗೆ ಕೂಡ ಇದೆ. ಇದು ಬೇಸಿಗೆ ಕಾಲದಲ್ಲೂ ತಂಪಾಗಿಯೇ ಇರುತ್ತೆ. ಬ್ರಿಟೀಷರ ವಿರುದ್ಧ ಹೋರಾಡುವ ವೇಳೆಯಲ್ಲಿ ಮದ್ದುಗುಂಡುಗಳನ್ನ ಟಿಪ್ಪು ಸುಲ್ತಾನ್​ ಪಡೆ ಸಂಗ್ರಹಿಸಿ ಇಟ್ಟಿತ್ತು ಎಂದು ಹೇಳಲಾಗುತ್ತೆ. ಈ ಕೋಟೆಯ ಕಾಮಗಾರಿಗೆ 1785ರಲ್ಲಿ ಚಾಲನೆ ನೀಡಲಾಯ್ತು. ಕೋಟೆ 1792ರ ಹೊತ್ತಿಗೆ ಸಂಪೂರ್ಣವಾಗಿ ನಿರ್ಮಾಣವಾಯ್ತು.

ಫ್ರೆಂಚ್​ ಇಂಜಿನಿಯರ್​​ಗಳು ಈ ಕೋಟೆಯ ವಿನ್ಯಾಸಕ್ಕೆ ಐಡಿಯಾ ನೀಡಿದ್ದಾರೆ. ಇದೊಂದು ನಕ್ಷತ್ರಾಕಾರದ ಕೋಟೆಯಾಗಿದ್ದು ಇಲ್ಲಿಂದ ನೀವು ಅರಬ್ಬಿ ಸಮುದ್ರವನ್ನ ನೋಡಬಹುದಾಗಿದೆ.

ಈ ಕೋಟೆ ಸಕಲೇಶಪುರದಿಂದ 10 ಕಿಲೋಮೀಟರ್​​ ದೂರದಲ್ಲಿದ್ದು ನಿಮಗೆ ಸಾರಿಗೆ ಸೌಕರ್ಯಕ್ಕೆ ಯಾವುದೇ ತೊಂದರೆ ಇರೋದಿಲ್ಲ. ಆದರೆ ಕೋಟೆಯವರೆಗೂ ನಿಮಗೆ ವಾಹನ ಸೌಲಭ್ಯ ಸಿಗೋದಿಲ್ಲ. 200 ಮೀಟರ್​ ದೂರದಿಂದ 253 ಮೆಟ್ಟಿಲುಗಳನ್ನ ಹತ್ತಿ ಈ ಕೋಟೆಯ ಸೌಂದರ್ಯವನ್ನ ಕಣ್ತುಂಬಿಕೊಳ್ಳಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...