ಹಿಂದು ಧರ್ಮದಲ್ಲಿ ಮೊದಲು ಪೂಜಿಸಲ್ಪಡುವ ದೇವರು ಗಣೇಶ. ವಿಘ್ನವಿನಾಯಕ ಎಂದೇ ಆತನನ್ನು ಕರೆಯಲಾಗುತ್ತದೆ. ಗಣೇಶ ಸಂತೋಷ, ಶಾಂತಿ, ನೆಮ್ಮದಿಯನ್ನು ನೀಡುತ್ತಾನೆ, ಯಾವುದೇ ನಕಾರಾತ್ಮಕ ಶಕ್ತಿ ಮನೆಯೊಳಗೆ ಬರದಂತೆ ನೋಡಿಕೊಳ್ಳುತ್ತಾನೆ ಎನ್ನುವ ಕಾರಣಕ್ಕೆ ಬಹುತೇಕರು ಮನೆಯ ಮುಖ್ಯ ಬಾಗಿಲಿಗೆ ಗಣೇಶನ ಚಿತ್ರವನ್ನು ಹಾಕುತ್ತಾರೆ. ಇಲ್ಲವೆ ಮುಖ್ಯ ಬಾಗಿಲಿನ ಬಳಿ ಗಣೇಶನ ವಿಗ್ರಹವನ್ನು ಇಡುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಹೀಗೆ ಮಾಡೋದು ತಪ್ಪು ಎನ್ನಲಾಗಿದೆ.
ಬಹುತೇಕ ಎಲ್ಲರಿಗೂ ಗಣಪತಿಯ ಜನನದ ಬಗ್ಗೆ ಮಾಹಿತಿ ಇದೆ. ಪಾರ್ವತಿ ಬೆವರಿನಿಂದ ಬಂದ ಗಣಪತಿ ಮನೆಯ ಬಾಗಿಲು ಕಾಯುತ್ತಿರುತ್ತಾನೆ. ಆ ಸಮಯದಲ್ಲಿ ಬಂದ ಈಶ್ವರ ಏನು ಮಾಡಿದೆ ಎಂಬ ಕಥೆ ಗೊತ್ತಿದೆ. ಮುಖ್ಯಬಾಗಿಲಿಗೆ ಗಣಪತಿ ಫೋಟೋ ಹಾಕಬಾರದು ಎನ್ನುವುದಕ್ಕೆ ಇದೂ ಒಂದು ಕಾರಣವಿದೆ. ಇಷ್ಟೇ ಅಲ್ಲ ಗಣೇಶ ಬುದ್ಧಿವಂತ. ಸಂಕಷ್ಟ ಹರಣ ಎಂದು ಕರೆಯಲಾಗುತ್ತದೆ. ಆ ದೇವರನ್ನು ಮನೆಯಿಂದ ಹೊರಗೆ ಇಡುವುದು ಸೂಕ್ತವಲ್ಲ. ಇದ್ರಿಂದ ಮನೆಗೆ ಮಂಗಳವಾಗುವುದಿಲ್ಲ ಎನ್ನುತ್ತಾರೆ ವಾಸ್ತು ತಜ್ಞರು.
ಗಣೇಶನ ವಿಗ್ರಹ ಅಥವಾ ಫೋಟೋ ಯಾವಾಗ್ಲೂ ಮನೆಯ ಒಳಗೆ ಇರಬೇಕು. ಮನೆಯ ಈಶಾನ್ಯ ದಿಕ್ಕಿನಲ್ಲಿ ವಿಗ್ರಹ ಇಟ್ಟು ಪೂಜೆ ಮಾಡಬೇಕು. ನೀವು ಗಣೇಶನ ಕಿವಿ ಆಕಾರದ ಎಲೆಯುಳ್ಳ ಗಿಡವನ್ನು ಮುಖ್ಯ ಬಾಗಿಲಿನ ಬಳಿ ಇಡಿ. ಅಲ್ಲದೆ ಮನೆಯ ಬಾಗಿಲು ವಿಶಾಲವಾಗಿರುವಂತೆ ನೋಡಿಕೊಳ್ಳಿ. ಮನೆಯಲ್ಲಿ ಸ್ಫಟಿಕದ ಗಣೇಶ ಮೂರ್ತಿಯನ್ನು ಪೂಜೆ ಮಾಡಿ. ಇದ್ರಿಂದ ಎಲ್ಲ ರೀತಿಯ ಲಾಭವನ್ನು ನೀವು ಕಾಣುತ್ತೀರಿ.