ಬೆಂಗಳೂರು : ಯಜಮಾನಿಯರೇ ಇನ್ನೂ ಗೃಹಲಕ್ಷ್ಮಿ ಹಣ ಬಂದಿಲ್ಲಾ..? ಎಂದು ಚಿಂತೆ ಮಾಡುತ್ತಿದ್ದೀರಾ..? ಹಾಗಿದ್ದರೆ ತಪ್ಪದೇ ಈ ಕೆಲಸ ಮಾಡಿ 2 ಕಂತಿನ ಹಣ ಒಟ್ಟಿಗೆ ಬರುತ್ತದೆ.
ಹೌದು. ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದ್ದು, ಹಲವು ಫಲಾನುಭವಿಗಳ ಖಾತೆಗೆ 2,000 ರೂ. ಹಣ ವರ್ಗಾವಣೆ ಮಾಡಲಾಗಿದೆ. ಆದರೆ ಕೆಲವು ಮಹಿಳೆಯರಿಗೆ ಇನ್ನೂ ಕೂಡ ಹಣ ಜಮಾ ಆಗಿಲ್ಲ. ಸದ್ಯದಲ್ಲೇ 2 ನೇ ಕಂತಿನ ಹಣ ಕೂಡ ಬಿಡುಗಡೆಯಾಗಲಿದೆ. ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡು ಅರ್ಹರಾಗಿರುವ 7-8 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳಲ್ಲಿ ಸಮಸ್ಯೆಗಳಾಗಿವೆಯಂತೆ. ಆದ್ದರಿಂದ ಹಣ ಜಮೆ ಆಗಿಲ್ಲ ಎಂದು ಹೇಳಲಾಗಿದೆ. ಇನ್ನೂ, ನಿಮ್ಮ ಕಡೆಯಿಂದ ಆದ ಕೆಲವು ಮಿಸ್ಟೇಕ್ ಗಳಿಂದ ಹಣ ಜಮಾ ಆಗದನೇ ಇರಬಹುದು.
1) ನೀವು ಮೊದಲು ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಮೂರರಲ್ಲಿ ಕೂಡ ಕುಟುಂಬದ ಮುಖ್ಯಸ್ಥೆಯ ಹೆಸರು ಒಂದೇ ರೀತಿ ಇರಬೇಕು. ಇದನ್ನು ಮೊದಲು ಚೆಕ್ ಮಾಡಿಕೊಳ್ಳಿ. ಉದಾಹರಣೆಗೆ : ಸರೋಜಾದೇವಿ ಎಂದು ಆಧಾರ್ ಕಾರ್ಡ್ ನಲ್ಲಿ ಇರುತ್ತೆ, ರೇಷನ್ ಕಾರ್ಡ್ ನಲ್ಲಿ ಸರೋಜಾ ಎಂದು ಮಾತ್ರ ಇರುತ್ತದೆ. ಇಂತಹ ತಪ್ಪುಗಳು ಆಗಿದ್ದಲ್ಲಿ ಕೂಡಲೇ ಸರಿಪಡಿಸಿಕೊಳ್ಳಿ.ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ವಿವರದಲ್ಲಿ ಮಾಹಿತಿಗಳು ಹೊಂದಾಣಿಕೆ ಆಗಿರಬೇಕು.
2) ನಿಮ್ಮ ರೇಷನ್ ಕಾರ್ಡ್ ಇ-ಕೆವೈಸಿ ಆಗಿದೆಯೇ ಎನ್ನುವುದನ್ನು ಧೃಡಪಡಿಸಿಕೊಳ್ಳಬೇಕು. ಹಾಗೂ ನಿಮ್ಮ ರೇಷನ್ ಕಾರ್ಡ್ ಸಕ್ರಿಯವಾಗಿದೆ ಎನ್ನುವುದನ್ನು ಪರಿಶೀಲಿಸಿಕೊಳ್ಳಬೇಕು.
3) ಇ ಕೆವೈಸಿ ಆಗದೇ ಇದ್ದರೆ ಹತ್ತಿರದ ಸೇವಾ ಕೇಂದ್ರ ಅಥವಾ ನ್ಯಾಯಬೆಲೆ ಅಂಗಡಿಗೆ ಹೋಗಿ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಮತ್ತು ಬಯೋಮೆಟ್ರಿಕ್ ಮಾಹಿತಿ ನೀಡಿ ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಕೊಳ್ಳಿ.
ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆ ಎನ್ನುವುದನ್ನು ದೃಢಪಡಿಸಿಕೊಳ್ಳಿ. ಆಧಾರ್ ಲಿಂಕ್ ಮಾತ್ರವಲ್ಲ ಸೀಡಿಂಗ್ ಆಗಿ NPCI ಮ್ಯಾಪಿಂಗ್ ಕೂಡ ಆಗಿರಬೇಕು.
4) ಹಣ ವರ್ಗಾವಣೆ ಮಾಡುವಾಗ ಅವರ ಖಾತೆಗಳು ಎರರ್ ಬರುತ್ತಿವೆ ಎನ್ನಲಾಗಿದೆ. ಮಹಿಳೆಯರು ಅವರ ಖಾತೆಗಳನ್ನು ಬಳಕೆ ಮಾಡದ ಕಾರಣ ಅವುಗಳು ಕ್ಲೋಸ್ ಆಗಿದೆ. ಹಾಗಾಗಿ ಎರರ್ ಬರುತ್ತಿದೆ ಎನ್ನಲಾಗಿದೆ.
5) ಬ್ಯಾಂಕ್ ಖಾತೆ ರದ್ದಾಗಿರುವ ಕಾರಣದಿಂದ ಅಂತಹ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲು ಆಗುತ್ತಿಲ್ಲ. ಆದ್ದರಿಂದ ಹಣ ಬಾರದ ಮಹಿಳೆಯರು ಕೂಡಲೇ ತಮ್ಮ ಬ್ಯಾಂಕ್ ಪಾಸ್ ಪುಸ್ತಕದೊಂದಿಗೆ ಬ್ಯಾಂಕ್ ಗೆ ತೆರಳಿ ಈ ಬಗ್ಗೆ ಪರಿಶೀಲನೆ ಮಾಡಿಸಿ.