alex Certify ʼಡಿಜಿಟಲ್ ವಂಚನೆʼಗೆ ಸಿಲುಕಿದ್ದೀರಾ ? ಹಾಗಾದ್ರೆ ತಪ್ಪದೆ ಇದನ್ನು ಓದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಡಿಜಿಟಲ್ ವಂಚನೆʼಗೆ ಸಿಲುಕಿದ್ದೀರಾ ? ಹಾಗಾದ್ರೆ ತಪ್ಪದೆ ಇದನ್ನು ಓದಿ

ಹಬ್ಬಗಳ ಸಮಯದಲ್ಲಿ ಖರೀದಿದಾರರಿಗೆ ಹಣ ಖರ್ಚು ಮಾಡಲು ಸೂಕ್ತ ಸಮಯವಾಗಿದೆ. ಇದರಿಂದಾಗಿ ಆರ್ಥಿಕ ವಂಚನೆಗೆ ಸಿಲುಕುವ ಸಾಧ್ಯತೆಯೂ ಹೆಚ್ಚಾಗಿದೆ. ಡಿಜಿಟಲ್ ಪಾವತಿ ವಂಚನೆಗಳು ಅತ್ಯಂತ ಜಾಗರೂಕ ಬಳಕೆದಾರರನ್ನು ಸಹ ಆ ಬಲೆಗೆ ಸಿಲುಕಿಸುವ ಸಾಧ್ಯತೆ ಇದೆ. ಎಲ್ಲರಿಗೂ ಡಿಜಿಟಲ್ ಪಾವತಿಗಳು ಸುರಕ್ಷಿತವಾಗಿಗುವಂತೆ e-BAAT ಮತ್ತು RBI Kehta Hai ನಂತಹ ಕಾರ್ಯಕ್ರಮಗಳ ಮೂಲಕ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಆದಾಗ್ಯೂ, ನೀವೇನಾದರೂ ವಂಚನೆಗೆ ಒಳಗಾಗಿದ್ದರೆ, ನೀವು ಅದನ್ನು ಹೇಗೆ ಪರಿಹರಿಸಿಕೊಳ್ಳುತ್ತೀರಿ ? ನೀವು ವಂಚನೆಗೊಳಗಾದಲ್ಲಿ ಅದರಿಂದಾಗುವ ಅಪಾಯವನ್ನು ಕಡಿಮೆ ಮಾಡಲು ತ್ವರಿತವಾಗಿ ಕ್ರಮ ಕೈಗೊಳ್ಳುವ ಮೂಲಕ ಪಾರಾಗಲು ವೀಸಾ ನೀಡುತ್ತಿರುವ ಐದು ಪರಿಣಾಮಕಾರಿ ಸಲಹೆಗಳು ಇಲ್ಲಿವೆ.

ಅಧಿಕೃತ ಗ್ರಾಹಕ ಸೇವೆಗಳಿಗೆ ಮಾತ್ರವೇ ಕರೆ ಮಾಡಿ

ಸಮಯವನ್ನು ವ್ಯರ್ಥ ಮಾಡದೇ ಅವರ ಅಧಿಕೃತ ಸಂವಹನದಲ್ಲಿ ಒದಗಿಸಲಾಗಿರುವ ನಿಮ್ಮ ಬ್ಯಾಂಕ್ ಅಥವಾ ಪಾವತಿ ಪೂರೈಕೆದಾರರ ಕಸ್ಟಮರ್ ಕೇರ್ ಸಂಖ್ಯೆಗೆ ಕರೆ ಮಾಡಿ. ಅಧಿಕೃತವಾಗಿ ಪಟ್ಟಿ ಮಾಡಲಾಗಿರುವ ಸಂಪರ್ಕ ಸಂಖ್ಯೆಗಳ ಮೇಲೆ ಮಾತ್ರವೇ ವಿಶ್ವಾಸವಿಡಿ ಮತ್ತು ಸಂದರ್ಭಾನುಸಾರ ನಿಮ್ಮ ಖಾತೆಯನ್ನು ಫ್ರೀಜ್ ಮಾಡಿ ಅಥವಾ ನಿಮ್ಮ ಕಾರ್ಡ್/ಪಾವತಿ ವಿಧಾನವನ್ನು ನಿರ್ಬಂಧಿಸಿ. ನಂತರದಲ್ಲಿನ ಯಾವುದೇ ವಂಚನೆಯ ಚಟುವಟಿಕೆಯನ್ನು ತಡೆಯಲು ಮತ್ತು ಯಾವುದೇ ಚಾರ್ಜ್‌ಬ್ಯಾಕ್ ಅಥವಾ ಮರುಪಾವತಿಯನ್ನು ಸಕ್ರಿಯಗೊಳಿಸಲು ಇದು ನಿಮ್ಮನ್ನು ಸಕ್ರಿಯಗೊಳಿಸುತ್ತದೆ.

ತಡಮಾಡದೆ ವರದಿ ಮಾಡಿ

ತಡಮಾಡದೇ ಬ್ಯಾಂಕ್ ಮತ್ತು ರಾಷ್ಟ್ರೀಯ ಸೈಬರ್ ಕ್ರೈಮ್ ಸಹಾಯವಾಣಿಯಂತಹ ಸೂಕ್ತ ಅಧಿಕಾರಿಗಳಿಗೆ ವರದಿ ಮಾಡಿ (ಡಯಲ್ 1930). National Cyber Crime Reporting Portal (NCRP) ಅಥವಾ ನಿಮ್ಮ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಮತ್ತು ಪ್ರತಿಯನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ.

ಪ್ರತಿ ವಿವರವನ್ನು ದಾಖಲಿಸಿ

ಹಗರಣದ ಅವ್ಯವಸ್ಥೆಯ ನಡುವೆಯೂ, ಗಾಬರಿಗೊಳ್ಳುಗುವುದು ಮತ್ತು ನಿರ್ಣಾಯಕ ವಿವರಗಳನ್ನು ಕಡೆಗಣಿಸುವುದು ಸಾಮಾನ್ಯ. ನೀವು ಕ್ರಿಮಿನಲ್ ಚಟುವಟಿಕೆ ಎಂದು ಅನುಮಾನಗೊಂಡ ಕ್ಷಣದಿಂದ ವಿವರಗಳನ್ನು ನೆನಪಿಟ್ಟುಕೊಳ್ಳಲು ಮತ್ತು ಎಲ್ಲವನ್ನೂ ದಾಖಲಿಸಲು ಪ್ರಯತ್ನಿಸಿ; ಸಂಭಾಷಣೆಯನ್ನು ರೆಕಾರ್ಡ್ ಮಾಡಿ, ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳಿ, ಯಾವುದೇ ಸಂದೇಶಗಳನ್ನು ಕಾಪಿ ಮಾಡಿಕೊಳ್ಳಿ, ಇತ್ಯಾದಿ. ನೀವು ಸ್ಕ್ಯಾಮರ್‌ನೊಂದಿಗೆ ಹಂಚಿಕೊಂಡಿರಬಹುದಾದ ವಹಿವಾಟು ಐಡಿಗಳು, ದಿನಾಂಕಗಳು, ಮೊತ್ತಗಳು ಇತ್ಯಾದಿಗಳನ್ನು ಸಹ ದಾಖಲು ಮಾಡಿಟ್ಟುಕೊಳ್ಳಿ; ವಂಚನೆಯನ್ನು ವರದಿ ಮಾಡುವಾಗ ಮತ್ತು ಪರಿಹರಿಸುವಾಗ ಈ ವಿವರಗಳು ಅತ್ಯಮೂಲ್ಯವಾಗಬಹುದು.

ನಿಮ್ಮ ಸುರಕ್ಷತೆಯನ್ನು ಅಪ್‌ಗ್ರೇಡ್ ಮಾಡಿ

ಪಾಸ್‌ವರ್ಡ್‌ಗಳನ್ನು ಬಲವಾದ ಮತ್ತು ಅನನ್ಯವಾದವುಗಳಿಗೆ ನವೀಕರಿಸುವ ಮೂಲಕ ನಿಮ್ಮ ಭದ್ರತೆಯನ್ನು ಬಲಪಡಿಸಿ, ಎರಡು ಅಂಶಗಳ ದೃಢೀಕರಣವನ್ನು ಸಕ್ರಿಯಗೊಳಿಸಿ ಮತ್ತು ನಿಮ್ಮ ಸಾಧನ/ಗಳನ್ನು ನಿಯಮಿತವಾಗಿ ಸ್ಕ್ಯಾನ್ ಮಾಡಬಲ್ಲ ಪ್ರಬಲ ಮಾಲ್‌ವೇರ್ ಅನ್ನು ಸ್ಥಾಪಿಸಿ. ಒಮ್ಮೆ ನೀವು ಅದನ್ನು ಆನ್ ಮಾಡಿದ ನಂತರ, ಆನ್‌ಲೈನ್ ವಹಿವಾಟುಗಳಿಗೆ RBI ಕಡ್ಡಾಯಗೊಳಿಸಿದ ಟೋಕನೈಸೇಶನ್‌ನಂತಹ ದೃಢವಾದ ಭದ್ರತಾ ಕ್ರಮಗಳನ್ನು ಹೊಂದಿದ ಪಾವತಿ ಆಯ್ಕೆಗಳನ್ನು ಆರಿಸಿಕೊಳ್ಳಿ.

ಪ್ರಚರಿಸಿ ಮತ್ತು ಅರಿವನ್ನು ಮೂಡಿಸಿ

ಡಿಜಿಟಲ್ ಪಾವತಿ ಹಗರಣಕ್ಕೆ ಬಲಿಯಾಗುವುದು ಒಂದು ಅಗ್ನಿಪರೀಕ್ಷೆಯೇ ಆಗಿದೆ. ನಿಮ್ಮ ಅನುಭವವನ್ನು ಸ್ನೇಹಿತರು, ಕುಟುಂಬ, ಹಿರಿಯರು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಅಗತ್ಯ ಸುರಕ್ಷತಾ ಸಲಹೆಗಳು ಮತ್ತು ನೀವು ಮಾಡಿದ ಯಾವುದೇ ತಪ್ಪುಗಳು ಅಥವಾ ಸರಿಗಳ ಸಹಿತ ಪೂರ್ವಭಾವಿಯಾಗಿ ಹಂಚಿಕೊಳ್ಳಿ, ಆದರಿಂದಾಗಿ ಅವರೂ ಕೂಡಾ ನಿಮ್ಮ ಅನುಭವದಿಂದ ಅರಿವನ್ನು ಪಡೆಯಬಹುದು ಹಾಗೂ ಜಾಗರೂಕರಾಗಿರಬಹುದು.

ಜೊತೆಗೂಡಿ, ನಾವು ಹೆಚ್ಚು ಜಾಗೃತರಾಗುವ ಮೂಲಕ, ನಮ್ಮ ಸಾಧನಗಳನ್ನು ರಕ್ಷಿಸಿಕೊಳ್ಳುವ ಮೂಲಕ ಮತ್ತು ಮಾಹಿತಿ ಹೊಂದುವ ಮತ್ತು ಜಾಗರೂಕರಾಗಿರುವುದರ ಮೂಲಕ ಸುರಕ್ಷಿತ ಮತ್ತು ಸುಭದ್ರ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ಬೆಳೆಸಿಕೊಳ್ಳಬಹುದು, ಕೇವಲ ನಮಗಾಗಿ ಮಾತ್ರವಲ್ಲದೆ ನಮ್ಮ ಸುತ್ತಮುತ್ತಲಿನ ಇತರರಿಗೂ ಸಹ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...