ಸಾಮಾನ್ಯವಾಗಿ ರೈಲು ಹಾದು ಹೋಗುವ ಸಂದರ್ಭಗಳಲ್ಲಿ ವಾಹನಗಳನ್ನು ನಿಲ್ಲಿಸುವ ಸಲುವಾಗಿ ಗೇಟ್ ಹಾಕುತ್ತಾರೆ. ಒಂದೊಮ್ಮೆ ಗೇಟ್ ಇರದಿದ್ದರೆ ಅಂತಹ ಸ್ಥಳದಲ್ಲಿ ರೈಲ್ವೆ ಇಲಾಖೆಯ ಸಿಬ್ಬಂದಿ ಕಾದು ನಿಂತು ರೈಲು ಹೋಗುವವರೆಗೂ ಆ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸುತ್ತಾರೆ.
ಆದರೆ ವಾಹನಗಳು ಹಾದು ಹೋಗುವ ಸಂದರ್ಭದಲ್ಲಿ ಅದಕ್ಕೆ ಅವಕಾಶ ಮಾಡಿಕೊಟ್ಟು ನಿಲ್ಲುವ ರೈಲನ್ನು ನೀವು ನೋಡಿದ್ದೀರಾ ? ಅಂತಹ ರೈಲಿನ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಹಲವರು ಲೇವಡಿ ಮಾಡುತ್ತಿದ್ದಾರೆ.
ಈ ವಿಡಿಯೋ ಪಾಕಿಸ್ತಾನದ್ದು ಎಂದು ಸೋಶಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಹೇಳಲಾಗಿದ್ದು, ಗೂಡ್ಸ್ ರೈಲು ಒಂದು ಗೇಟ್ ಇಲ್ಲದ ರಸ್ತೆಯಲ್ಲಿ ಜನ ಹಾಗೂ ವಾಹನ ಹಾದು ಹೋಗಲು ಕಾದು ನಿಂತಿದೆ. ಅಷ್ಟರೊಳಗಾಗಿ ಸ್ಥಳಕ್ಕೆ ಬರುವ ಇಬ್ಬರು ವಾಹನಗಳನ್ನು ನಿಲ್ಲಿಸಿ ಗೂಡ್ಸ್ ರೈಲು ಹಾದು ಹೋಗಲು ಅನುವು ಮಾಡಿಕೊಡುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.