alex Certify ಪೋಷಕಾಂಶಗಳ ಆಗರ ʼಪಿಯರ್ಸ್ʼ ತಿಂದಿದ್ದೀರಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಷಕಾಂಶಗಳ ಆಗರ ʼಪಿಯರ್ಸ್ʼ ತಿಂದಿದ್ದೀರಾ…?

ಪಿಯರ್ಸ್ ಹಣ್ಣನ್ನು ಕನ್ನಡದಲ್ಲಿ ಮರಸೇಬು ಎಂದೂ ಕರೆಯಲಾಗುತ್ತದೆ. ಇದರ ಸೇವನೆಯಿಂದ ಎಷ್ಟೆಲ್ಲಾ ಲಾಭಗಳನ್ನು ಪಡೆದುಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ?

ಇದು ಕೂಡಾ ಸೇಬಿನಂತೆ ಪೋಷಕಾಂಶಗಳ ಆಗರವಾಗಿದ್ದು ಅತ್ಯುತ್ತಮ ಪ್ರಮಾಣದ ನಾರಿನಾಂಶವಿದೆ. ಮಲಬದ್ಧತೆ ಸಮಸ್ಯೆ ಇರುವವರು ನಿತ್ಯ ಈ ಹಣ್ಣನ್ನು ಸೇವಿಸುವುದರಿಂದ ನಿಮ್ಮ ಸಮಸ್ಯೆ ದೂರವಾಗುತ್ತದೆ. ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸುವ ಇದರಲ್ಲಿ ಫೈಬರ್ ಅಂಶಗಳು ಹೇರಳವಾಗಿವೆ.

ಮಧುಮೇಹ ನಿಯಂತ್ರಣಕ್ಕೂ ಈ ಹಣ್ಣನ್ನು ಸೇವಿಸಬಹುದು. ಹೃದಯ ಸಂಬಂಧಿ ಕಾಯಿಲೆಗಳನ್ನು ಬರದಂತೆ ನೋಡಿಕೊಳ್ಳುವ ಪಿಯರ್ಸ್ ಕ್ಯಾನ್ಸರ್ ಗೂ ರಾಮಬಾಣ ಎಂದು ಗುರುತಿಸಿಕೊಂಡಿದೆ.

ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಇದನ್ನು ಮಕ್ಕಳಿಗೂ ನಿರಾತಂಕವಾಗಿ ಕೊಡಬಹುದು. ಇದಕ್ಕೆ ಚಿಟಿಕೆ ಉಪ್ಪು ಹಾಗೂ ಖಾರ ಹಾಕಿ ತಿಂದರೆ ರುಚಿ ಜಾಸ್ತಿ. ಈ ಹಣ್ಣಿನಲ್ಲಿರುವ ಗ್ಲುಕೋಸ್ ದೇಹಕ್ಕೆ ತಕ್ಷಣ ಶಕ್ತಿ ಒದಗಿಸಿ ಕೊಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...