ದೇಶದಲ್ಲಿ ಕೊರೊನಾ ಮೂರನೇ ಅಲೆ ನಡೆಯುತ್ತಿದೆ. ಈ ತಿಂಗಳಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎನ್ನಲಾಗ್ತಿದೆ. ಕೊರೊನಾ ಜೊತೆ ಓಮಿಕ್ರೋನ್ ಎಲ್ಲರ ಟೆನ್ಷನ್ ಹೆಚ್ಚಿಸಿದೆ. ಕೊರೊನಾ ಲಕ್ಷಣಗಳು ಕಂಡು ಬರ್ತಿದ್ದಂತೆ ಮೊದಲು ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ.
ಕೊರೊನಾ ಸೋಂಕಿನ ಲಕ್ಷಣ ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಭೇಟಿಯಾಗಿ. ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ. ಕೊರೊನಾ ಸೋಂಕಿಗೆ ಒಳಗಾದವರ ಸಂಪರ್ಕಕ್ಕೆ ಬಂದಲ್ಲಿ ನೀವು ತಕ್ಷಣ ಐಸೋಲೇಷನ್ ಆಗುವುದು ಒಳ್ಳೆಯದು. ಕೊರೊನಾ ಸಾಂಕ್ರಾಮಿಕ ರೋಗವಾಗಿರುವ ಕಾರಣ ನೀವು ಪ್ರತ್ಯೇಕವಾಗಿರುವುದ್ರಿಂದ ಉಳಿದವರಿಗೆ ಸೋಂಕು ತಗಲುವುದಿಲ್ಲ. ಮನೆಯಲ್ಲಿ ಹಿರಿಯರಿದ್ದರೆ ಅವರಿಗೆ ಕೊರೊನಾ ಬೇಗ ಹರಡುತ್ತದೆ. ಹಾಗಾಗಿ ಅವರಿಂದ ದೂರವಿರುವುದು ಒಳ್ಳೆಯದು. ವೈದ್ಯರು ಹೇಳಿದಂತೆ ಮಾತ್ರೆಗಳ ಸೇವನೆ ಮಾಡಬೇಕು.
ಕೊರೊನಾ ಬಂದ ವಿಷ್ಯವನ್ನು ಮುಚ್ಚಿಡಬೇಡಿ. ನಿಮಗೆ ಕೊರೊನಾ ಬಂದಿದೆ ಎಂಬುದು ಗೊತ್ತಾದಲ್ಲಿ, ನಿಮ್ಮ ಸಂಪರ್ಕಕ್ಕೆ ಬಂದವರು ಜಾಗೃತರಾಗ್ತಾರೆ. ಕೊರೊನಾ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಹಾಗಾಗಿ ಒಳ್ಳೆಯ ಆಹಾರ ಸೇವನೆ ಮಾಡಬೇಕು. ಸಾಧ್ಯವಾದಷ್ಟು ನೀರು, ಜ್ಯೂಸ್ ಸೇವನೆ ಮಾಡಿ. ಹಸಿ ತರಕಾರಿಗಳ ಸೇವನೆ ಮಾಡಿ.