ನಿಮ್ಮ ಕಾರನ್ನು ಸುಗಮವಾಗಿ ಚಲಿಸಲು ಅದರ ಉತ್ಪಾದಕರು ನಿಮಗೆ ಒಂದಷ್ಟು ಸೂಚನೆ ಹಾಗೂ ಸಲಹೆಗಳನ್ನು ಕೊಡುತ್ತಾರೆ. ಮೊದಲ 1000-1500 ಕಿಮೀವರೆಗೂ ಇಂಜಿನ್‌ನ ಗಿರಕಿಗಳು 2000-2500 ಆರ್‌ಪಿಎಂ ದಾಟದಂತೆ ಸಾಗಲು ಬಹುತೇಕ ಎಲ್ಲ ಕಾರುಗಳ ಉತ್ಪಾದಕರೂ ತಮ್ಮ ಗ್ರಾಹಕರಿಗೆ ತಿಳಿಸುತ್ತಾರೆ.
ಇದು ಮೊದಲ ಒಂದು ತಿಂಗಳವರೆಗೂ ಹೀಗೇ ಇರಬೇಕಾಗುತ್ತದೆ. ನಂತರ ನೀವು ಸಾಮಾನ್ಯ ಚೆಕ್-ಅಪ್‌ಗೆ ಕಾರನ್ನು ಕೊಂಡೊಯ್ಯಬೇಕಾಗುತ್ತದೆ.
2. ವೇಗವನ್ನು 80 ಕಿಮೀ/ಗಂಟೆಗಿಂತ ಕಡಿಮೆ ಇಡಲು ನೋಡಿ:
ಇದು ಸಾಮಾನ್ಯವಾಗಿ ಮೊದಲ ಅಂಶದ ವಿಸ್ತರಿತ ಸಲಹೆಯಾಗಿದೆ. ಕಾರಿನ ವೇಗ ಹೆಚ್ಚಾದಷ್ಟೂ ಇಂಜಿನ್‌ನ ಗಿರಕಿ/ನಿಮಿಷ (ಆರ್‌ಪಿಎಂ) ಹೆಚ್ಚಾಗುತ್ತದೆ.
ಇದರೊಂದಿಗೆ ಹೊಸ ಇಂಜಿನ್ ಮೇಲೆ ನೀವು ಒತ್ತಡ ಹಾಕಿದಂತೆ ಆಗುತ್ತದೆ. ಹೀಗಾಗಿ 80ಕಿಮೀ/ಗಂಟೆಗಿಂತ ಕಡಿಮೆ ವೇಗದಲ್ಲಿ ಚಾಲನೆ ಮಾಡಲು ಪ್ರಯತ್ನಿಸಿ.
3. ದಿಢೀರ್ ಬ್ರೇಕ್ ಹಾಕುವುದನ್ನು ತಪ್ಪಿಸಿ:
ತೀರಾ ಅನಿವಾರ್ಯತೆ ಇದ್ದಾಗಲೂ ಬ್ರೇಕ್ ಹಾಕಬೇಡಿ ಎಂದು ಹೇಳುತ್ತಿಲ್ಲ. ಕಾರು ಮೊದಲ ಸರ್ವೀಸ್‌ಗೆ ಹೋಗುವವರೆಗೂ ಬ್ರೇಕ್ ಅನ್ನು ವ್ಯವಧಾನವಾಗಿ ಬಳಸಿದಷ್ಟು ಉತ್ತಮ. ಹೀಗಾಗಿ ಸುದೀರ್ಘ ರಸ್ತೆ ಟ್ರಿಪ್‌ಗಳನ್ನು ಮೊದಲ ಸರ್ವೀಸ್‌ವರೆಗೂ ಸಾಧ್ಯವಾದಷ್ಟು ತಪ್ಪಿಸಿ.
4. ಇಂಜಿನ್ ಆಯಿಲ್ ಪರೀಕ್ಷಿಸಿ:
ನಿಮ್ಮ ಕಾರಿನ ಆರೋಗ್ಯದ ದೃಷ್ಟಿಯಿಂದ ಈ ಸಲಹೆ ಬಹಳ ಮುಖ್ಯವಾಗಿದೆ. ಹೊಸ ಕಾರಿನ ಇಂಜಿನ್ ಆಯಿಲ್ ಅನ್ನು ಪ್ರತಿ ವಾರಕ್ಕೊಮ್ಮೆ ಪರೀಕ್ಷಿಸಬೇಕಾಗುತ್ತದೆ.
5. ಯಾವುದೇ ಕಾರಣಕ್ಕೂ ಮೊದಲ ಸರ್ವೀಸ್ ತಪ್ಪಿಸಬೇಡಿ:
ಜೀವನದಲ್ಲಿ ಅದೆಷ್ಟೇ ಬ್ಯುಸಿ ಆಗಿದ್ದರೂ ಸಹ, ಕಾರಿನ ಮೊದಲ ಸರ್ವೀಸ್ ಬಹಳ ಅಮೂಲ್ಯವಾದದ್ದು. ನಿಗದಿತ ಕಾಲಮಿತಿಯೊಳಗೆ ನಿಮ್ಮ ಕಾರಿನ ಮೊದಲ ಸರ್ವೀಸ್ ಮಾಡುವುದು ಸುದೀರ್ಘಕಾಲೀನ ದೃಷ್ಟಿಯಿಂದ ಅತ್ಯಗತ್ಯವಾದ ಒಂದು ಕ್ರಮ.
ಪ್ರಮಾಣೀಕೃತ ತಜ್ಞರಿಂದ ಚೆಕ್-ಅಪ್ ಆಗುವ ವೇಳೆ ನಿಮ್ಮಲ್ಲಿ ಯಾವುದೇ ಪ್ರಶ್ನೆಗಳಿದ್ದರೂ ಸ್ಪಷ್ಟ ಪರಿಹಾರ ಕಂಡುಕೊಳ್ಳಲು ಇದರಿಂದ ಸಾಧ್ಯ.
ನಿಮ್ಮ ಕಾರಿನ ವಾರಂಟಿ ಹಾಳಾಗದಂತೆ ನೋಡಿಕೊಳ್ಳಲು ನಿಗದಿತ ಕಾಲಮಿತಿಯೊಳಗೆ ಸರ್ವೀಸ್ ಮಾಡಿಸುತ್ತಿರಬೇಕು.