ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವ ಸಸ್ಯಗಳಲ್ಲಿ ಮನಿ ಪ್ಲಾಂಟ್ ಒಂದು. ಮನಿ ಪ್ಲಾಂಟ್ ಮನೆಗೆ ಮಂಗಳಕರ. ಹಾಗಾಗಿಯೇ ಬಹುತೇಕರ ಮನೆಯಲ್ಲಿ ಮನಿ ಪ್ಲಾಂಟ್ ಕಾಣಸಿಗುತ್ತದೆ. ಮನೆಗೆ ಮನಿಪ್ಲಾಂಟ್ ತಂದ ನಂತ್ರ ವಾಸ್ತು ಶಾಸ್ತ್ರದ ಪ್ರಕಾರ ಅದನ್ನು ಇಡಬೇಕು.
ಮನಿ ಪ್ಲಾಂಟ್, ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಲು ನೆರವಾಗುತ್ತದೆ. ಆರ್ಥಿಕ ವೃದ್ಧಿಗೂ ಮನಿ ಪ್ಲಾಂಟ್ ಒಳ್ಳೆಯದು ಎನ್ನಲಾಗುತ್ತದೆ. ಮನಿ ಪ್ಲಾಂಟ್ ನೋಡಲು ಸುಂದರವಾಗಿರುತ್ತದೆ. ಹಾಗಾಗಿ ಅದ್ರ ಮೇಲೆ ಕೆಟ್ಟ ಕಣ್ಣು ಬೀಳದಂತೆ ಕಾಪಾಡಿಕೊಳ್ಳಬೇಕು. ಮನೆಯ ಮುಖ್ಯ ಗೇಟ್ ಗೆ ಹತ್ತಿರದಲ್ಲಿ ಇದನ್ನು ಇಡಬಾರದು. ಮನೆಯೊಳಗೂ ಎಲ್ಲರ ಕಣ್ಣಿಗೆ ಕಾಣುವ ಜಾಗದಲ್ಲಿ ಇದನ್ನು ಇಡಬಾರದು.
ಮನಿ ಪ್ಲಾಂಟ್ ನ ಒಣಗಿದ ಎಲೆಗಳನ್ನು ಮನೆಯಲ್ಲಿ ಇಡಬಾರದು. ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಮನಿ ಪ್ಲಾಂಟ್ ನ ಯಾವುದೇ ಭಾಗ ನೆಲಕ್ಕೆ ತಾಗಬಾರದು. ಸದಾ ಅದನ್ನು ಮೇಲ್ಭಾಗದಲ್ಲಿ ಇಡಬೇಕು. ವಾರದಲ್ಲಿ ಒಂದು ಬಾರಿ ಅದ್ರ ನೀರನ್ನು ಬದಲಿಸಬೇಕು. ಸೂರ್ಯನ ಬೆಳಕಿನಿಂದ ದೂರವಿಡಬೇಕು. ಮನಿ ಪ್ಲಾಂಟ್ ಮನೆಯ ಆಗ್ನೇಯ ದಿಕ್ಕಿನಲ್ಲಿರಬೇಕು. ಅನೇಕರು ಮನಿ ಪ್ಲಾಂಟನ್ನು ಮನೆಯ ಹೊರ ಭಾಗದಲ್ಲಿ ಬೆಳೆಸುತ್ತಾರೆ. ಆದ್ರೆ ಇದ್ರಿಂದ ಲಾಭವಿಲ್ಲ. ಮನೆಯೊಳಗೆ ಮನಿ ಪ್ಲಾಂಟ್ ಇದ್ದರೆ ಮಾತ್ರ ಲಾಭದಾಯಕ.