
ರಾಜಸ್ಥಾನದ ಭುಟಿಯಾ ಗ್ರಾಮದ ಬಳಿ ಅಚ್ಚರಿಯ ಘಟನೆಯೊಂದು ನಡೆಯುತ್ತಿದೆ. ಉದಯಪುರ-ಕುರಾಬಾದ್ ಬಂಬೋರಾ ರಸ್ತೆಯಲ್ಲಿ ಒಂದೇ ಸ್ಥಳದಲ್ಲಿ ಸರಣಿ ಅಪಘಾತ ಸಂಭವಿಸುತ್ತಿದೆ. ಕಳೆದ ಎರಡು ವರ್ಷಗಳಿಂದ ಒಂದೇ ಸ್ಥಳದಲ್ಲಿ ಅನೇಕ ಬಾರಿ ರಸ್ತೆ ಅಪಘಾತ ಸಂಭವಿಸಿದ್ದು ಸ್ಥಳೀಯರು, ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.
ಸಿಸಿಟಿವಿಯಲ್ಲಿ ಅಪಘಾತದ ವಿಡಿಯೋಗಳು ರೆಕಾರ್ಡ್ ಆಗಿವೆ. ಕೆಲ ಅಪಘಾತದಲ್ಲಿ ವಾಹನ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮತ್ತೆ ಕೆಲ ಅಪಘಾತದಲ್ಲಿ ಸವಾರರಿಗೆ ದೊಡ್ಡ ಪ್ರಮಾಣದಲ್ಲಿ ಗಾಯವಾಗಿದೆ. ಟ್ರಕ್ ಗೆ ಬೈಕ್ ಡಿಕ್ಕಿ ಹೊಡೆದಿದ್ದು, ಸವಾರ ಸ್ವಲ್ಪದರಲ್ಲಿ ಬಚಾವ್ ಆಗಿದ್ದಾನೆ. ಇನ್ನೊಂದು ವಿಡಿಯೋದಲ್ಲಿ ಜಾನುವಾರುಗಳು ರಸ್ತೆಗೆ ಅಡ್ಡ ಬಂದ ಕಾರಣ ಅಪಘಾತ ಸಂಭವಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಇದ್ರ ವಿಡಿಯೋಗಳು ವೈರಲ್ ಆಗಿವೆ. ವಿಡಿಯೋ ನೋಡಿದ ಜನರು, ಜಾನುವಾರುಗಳಿಂದ ಅಪಘಾತ ನಡೆಯುತ್ತಿದೆ. ಜಾನುವಾರುಗಳ ಮಾಲೀಕರು ಈ ಬಗ್ಗೆ ಗಮನ ಹರಿಸಬೇಕು ಎಂದಿದ್ದಾರೆ. ಮತ್ತೆ ಕೆಲವರು ದೆವ್ವದ ಕಾಟ ಎಂದಿದ್ದಾರೆ. ಈ ಜಾಗದಲ್ಲಿ ರಸ್ತೆ ಅಪಘಾತ ಸಂಭವಿಸುತ್ತದೆ ಎನ್ನುವುದು ಸ್ಥಳೀಯರಿಗೆ ತಿಳಿದಿರುವ ಕಾರಣ, ನಿಧಾನವಾಗಿ, ಎಚ್ಚರಿಕೆಯಿಂದ ಪ್ರಯಾಣ ಬೆಳೆಸುವಂತೆ ಕೆಲ ಬಳಕೆದಾರರು ಸಲಹೆ ನೀಡಿದ್ದಾರೆ.