ನವದೆಹಲಿ: ಹತ್ರಾಸ್ ಕಾಲ್ತುಳಿತದ ನಂತರ ಸೂರಜ್ ಪಾಲ್ ಅಲಿಯಾಸ್ ಭೋಲೆ ಬಾಬಾ ಅಲಿಯಾಸ್ ನಾರಾಯಣ್ ಸಕರ್ ವಿಶ್ವ ಹರಿ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದಾರೆ.
ಜುಲೈ 2ರ ಘಟನೆಯಿಂದ ತುಂಬಾ ನೋವಾಗಿದೆ ಎಂದು ಹೇಳಿದ್ದಾರೆ. ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ನಮಗೆ ನೀಡಲಿ ಎಂದು ಬಾಬಾ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.
ದಯವಿಟ್ಟು ಸರ್ಕಾರ ಮತ್ತು ಆಡಳಿತದ ಮೇಲೆ ನಂಬಿಕೆ ಇಡಿ. ಘಟನೆಗೆ ಕಾರಣರಾದವರನ್ನು ಬಿಡುವುದಿಲ್ಲ ಎಂಬ ವಿಶ್ವಾಸ ನನಗಿದೆ. ದುಃಖಿತ ಕುಟುಂಬಗಳು ಮತ್ತು ಗಾಯಾಳುಗಳ ಜೊತೆಗೆ ನಿಂತು ಅವರ ಜೀವನದುದ್ದಕ್ಕೂ ಅವರಿಗೆ ಸಹಾಯ ಮಾಡುವಂತೆ ನನ್ನ ವಕೀಲ ಎಪಿ ಸಿಂಗ್ ಮೂಲಕ ಸಮಿತಿಯ ಸದಸ್ಯರನ್ನು ವಿನಂತಿಸಿದ್ದೇನೆ ಎಂದು ಬಾಬಾ ಹೇಳಿದ್ದಾರೆ.
ಸಂತ್ರಸ್ತರಿಗೆ ನೆರವು ನೀಡುವುದಾಗಿ ಭೋಲೆ ಬಾಬಾ ಹೇಳಿದ್ದು, ಮೃತರ ಕುಟುಂಬದೊಂದಿಗೆ ಸದಾ ಇರುತ್ತೇನೆ. ಕಾಲ್ತುಳಿತ ಘಟನೆ ಒಂದು ಪಿತೂರಿ ಎಂದು ತಿಳಿಸಿದ್ದಾರೆ.
ಜುಲೈ 2 ರ ಘಟನೆಯ ನಂತರ ನಾನು ತುಂಬಾ ದುಃಖಿತನಾಗಿದ್ದೇನೆ. ದೇವರು ನಮಗೆ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ. ದಯವಿಟ್ಟು ನಂಬಿಕೆಯನ್ನು ಇಡಿ. ಸರ್ಕಾರ ಮತ್ತು ಆಡಳಿತವು ಅವ್ಯವಸ್ಥೆಯನ್ನು ಸೃಷ್ಟಿಸಿದ ಯಾರನ್ನೂ ಬಿಡುವುದಿಲ್ಲ ಎಂಬ ನಂಬಿಕೆ ನನಗಿದೆ. ನನ್ನ ವಕೀಲ ಎ.ಪಿ.ಸಿಂಗ್ ಅವರ ಮೂಲಕ ನಾನು ಸಮಿತಿಯ ಸದಸ್ಯರನ್ನು ದುಃಖಿತ ಕುಟುಂಬಗಳು ಮತ್ತು ಗಾಯಾಳುಗಳ ಜೊತೆಗೆ ನಿಂತು ಅವರ ಜೀವನದುದ್ದಕ್ಕೂ ಅವರಿಗೆ ಸಹಾಯ ಮಾಡಬೇಕೆಂದು ವಿನಂತಿಸಿದ್ದೇನೆ ಎಂದು ಹೇಳಿದ್ದಾರೆ.