ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇಗುಲದಲ್ಲಿ ಭಕ್ತರಿಗೆ ದರ್ಶನಕ್ಕೆ ಇವತ್ತೊಂದು ದಿನ ಮಾತ್ರ ಅವಕಾಶವಿದೆ. ನವೆಂಬರ್ 15ರಂದು ದೇವಾಲಯದ ಗರ್ಭಗುಡಿಯ ಬಾಗಿಲು ಮುಚ್ಚಲಿದೆ.
ನವೆಂಬರ್ 14ರ ತಡರಾತ್ರಿ ದರ್ಶನ ಕೊನೆಯಾಗಲಿದೆ. ನವೆಂಬರ್ 2ರಂದು ದೇವಾಲಯದ ಬಾಗಿಲು ತೆರೆಯಲಾಗಿದ್ದು, ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆದುಕೊಂಡಿದ್ದಾರೆ. ಜಾತ್ರಾ ಮಹೋತ್ಸವ ಆರಂಭವಾದ ನಂತರ 9.60 ಲಕ್ಷ ಭಕ್ತರು ಹಾಸನಾಂಬೆ ದರ್ಶನ ಪಡೆದುಕೊಂಡಿದ್ದಾರೆ. ಶನಿವಾರ ಒಂದೇ ದಿನ ಎರಡು ಲಕ್ಷಕ್ಕೂ ಅಧಿಕ ಭಕ್ತರು ದರ್ಶನ ಪಡೆದಿದ್ದಾರೆ. ಟಿಕೆಟ್ ಹಾಗೂ ಲಾಡು ಪ್ರಸಾದ ಮಾರಾಟದಿಂದ 5.8 ಕೋಟಿ ರೂ. ಸಂಗ್ರಹವಾಗಿದೆ.