
ಹಾಸನ: ಹಾಸನ ಜಿಲ್ಲೆ ಬೇಲೂರಿನಲ್ಲಿ ಹಳೆ ಕಟ್ಟಡ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ. ನಜೀರ್ ಮತ್ತು ಅಮರನಾಥ್ ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಬೇಲೂರಿನ ಚನ್ನಕೇಶವ ದೇವಾಲಯ ರಸ್ತೆಯ ಸಮೀಪ ಘಟನೆ ನಡೆದಿದ್ದು, ಮೂವರು ಮಹಿಳೆಯರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ನೀಲಮ್ಮ, ಜ್ಯೋತಿ, ಶಿಲ್ಪಾ ಅವರ ಸ್ಥಿತಿ ಗಂಭೀರವಾಗಿದೆ. ಮಧ್ಯಾಹ್ನ 1:30 ಸುಮಾರಿಗೆ ಕಟ್ಟಡ ಕುಸಿದಿದೆ ಎಂದು ಹಾಸನ ಎಸ್ಪಿ ಮೊಹಮ್ಮದ್ ಸುಜೇತಾ ಮಾಹಿತಿ ನೀಡಿದ್ದಾರೆ.
ಗಾಯಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಹಾಗೂ ಗಾಯಗೊಂಡವರು ವ್ಯಾಪಾರಸ್ಥರು ಎನ್ನುವ ಮಾಹಿತಿ ಗೊತ್ತಾಗಿದೆ. ಹಳೆ ಕಟ್ಟಡದ ಕೆಳಗೆ ವ್ಯಾಪಾರ ಮಾಡುತ್ತಿದ್ದವರ ಮೇಲೆ ಸಜ್ಜಾ ಕುಸಿದು ಬಿದ್ದಿದೆ. ಬೇಲೂರು ಬಸ್ ನಿಲ್ದಾಣದ ಎದುರು ಘಟನೆ ನಡೆದಿದೆ. ಸತ್ಯನಾರಾಯಣ ಎಂಬುವರಿಗೆ ಸೇರಿದ ಕಟ್ಟಡ ಇದಾಗಿದ್ದು, ಕಟ್ಟಡ ಮಾಲೀಕನನ್ನು ಪೊಲೀಸರು ವಿಚಾರಣೆ ನಡೆಸಲಿದ್ದಾರೆ ಎನ್ನಲಾಗಿದೆ.