ಹಾಸನ: ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕು ದೊಡ್ಡಬ್ಯಾಗತಹಳ್ಳಿ ಗ್ರಾಮದ ಸ್ಮಶಾನದಲ್ಲಿ ಜೀವಂತ ವ್ಯಕ್ತಿಗಳ ಫೋಟೋ ಇಟ್ಟು ಮಾಟ ಮಂತ್ರ ಮಾಡಿದ ಘಟನೆ ನಡೆದಿದೆ.
ಕೆಲವು ತಿಂಗಳ ಹಿಂದೆ ಮೃತಪಟ್ಟಿದ್ದ ವ್ಯಕ್ತಿಯ ಸಮಾಧಿ ಮಣ್ಣನ್ನು ತೆಗೆಯಲಾಗಿದೆ. ಜೀವಂತ ಇರುವ ಮಹಿಳೆಯರು ಮತ್ತು ಪುರುಷರ ಫೋಟೋಗಳನ್ನು ಮಣ್ಣಿನೊಳಗೆ ಇಟ್ಟು, ಅವುಗಳ ಬಳಿ ಮಡಿಕೆ, ತಲೆಕೂದಲು ಮತ್ತಿತರ ವಸ್ತುಗಳನ್ನು ಇಟ್ಟು ಮಾಟ ಮಂತ್ರ ಮಾಡಲಾಗಿದೆ. ಈ ಕುರಿತಾಗಿ ಆತಂಕಕಗೊಂಡ ಗ್ರಾಮಸ್ಥರು ಹೊಳೆನರಸೀಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.