ಹಾಸನ: ಹಾಸನ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಭೂಕಂಪನವಾಗಿದೆ. ಅರಕಲಗೂಡು ತಾಲೂಕಿನ ಹಣೆಮಾರನಹಳ್ಳಿ, ಕಾರಹಳ್ಳಿ, ಮುದ್ದನಹಳ್ಳಿಯಲ್ಲಿ ಬೆಳಗಿನಜಾವ 4.38ಕ್ಕೆ ಭೂಕಂಪನವಾಗಿದೆ.
ಹಾಸನ ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದೆ. ಅರಕಲಗೂಡು ತಾಲೂಕಿನ ಹಳ್ಳಿಗಳಲ್ಲಿ ಭೂಮಿ ಕಂಪಿಸಿದ್ದು, ಜನ ಆತಂಕಗೊಂಡಿದ್ದಾರೆ. ನಸುಕಿನ ನಿದ್ದೆಯಲ್ಲಿದ್ದವರಿಗೆ ಭೂಮಿ ನಡುಗಿದ ಅನುಭವವಾಗಿದ್ದು, ಮನೆಯಿಂದ ಹೊರಗೆ ಬಂದ ಜನ ತಮಗಾದ ಅನುಭವ ಹಂಚಿಕೊಂಡಿದ್ದಾರೆ.