ಹಾಸನ: ಹಾಸನ ಜಿಲ್ಲೆಯಲ್ಲಿ ಶಂಕಿತ ಡೆಂಘೀ ಜ್ವರಕ್ಕೆ ಮತ್ತೊಬ್ಬರು ಬಲಿಯಾಗಿದ್ದಾರೆ. ಶಂಕಿತ ಡೆಂಘೀ ಜ್ವರದಿಂದ ಬಾಲಕಿ ಸಮೃದ್ಧಿ(8) ಮೃತಪಟ್ಟಿದ್ದಾಳೆ.
ಮೂರು ದಿನದ ಹಿಂದೆ ಹಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿ ಸಮೃದ್ಧಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದರೊಂದಿಗೆ ಹಾಸನದಲ್ಲಿ ಡೆಂಘೀ ಜ್ವರಕ್ಕೆ ಮೂರನೇ ಬಲಿಯಾಗಿದೆ.
ಹೊಳೆನರಸೀಪುರ ತಾಲೂಕಿನ ದೊಡ್ಡಳ್ಳಿ ಗ್ರಾಮದ ನಿವಾಸಿ ರಮೇಶ್ -ಅಶ್ವಿನಿ ದಂಪತಿಯ ಎಂಟು ವರ್ಷದ ಪುತ್ರಿ ಸಮೃದ್ಧಿ 3-4 ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು. ಮೂರು ದಿನದ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕಿ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಮೈಸೂರು ಆಸ್ಪತ್ರೆಗೆ ದಾಖಲಿಸಿದ್ದು, ನಿನ್ನೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇತ್ತೀಚೆಗೆ ಡೆಂಘೀ ಜ್ವರದಿಂದ ಹೊಳೆನರಸೀಪುರ ತಾಲ್ಲೂಕು ಗುಡ್ಡೇನಹಳ್ಳಿ ನಿವಾಸಿ ಕಲಾಶ್ರೀ(11), ಹಳ್ಳಿಮೈಸೂರು ಹೋಬಳಿಯ ವರ್ಷಿಕಾ(8) ಮೃತಪಟ್ಟಿದ್ದರು.