ಹಾಸನ: ಹಾಸನದಲ್ಲಿ ರಾತ್ರೋರಾತ್ರಿ ತಾಲೂಕು ಕಚೇರಿ ಹಳೆಯ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ. ಟ್ರಕ್ ಟರ್ಮಿನಲ್ ನಿರ್ಮಾಣ ವಿವಾದದ ನಡುವೆಯೂ ಕಟ್ಟಡವನ್ನು ನೆಲಸಮ ಮಾಡಲಾಗಿದೆ.
ಟ್ರಕ್ ಟರ್ಮಿನಲ್ ವಿಚಾರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಜಟಾಪಟಿ ನಡೆದಿತ್ತು. ತಾಲೂಕು ಕಚೇರಿ ಕಟ್ಟಡವನ್ನು ಕೆಡವಲು ಬಿಡುವುದಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಎಚ್ಚರಿಕೆ ನೀಡಿದ್ದರು. ಗೋಲಿಬಾರ್ ನಡೆದರೂ ಕೂಡ ಬಿಡುವುದಿಲ್ಲ. ಹಳೆ ಕಟ್ಟಡ ಕೆಡವದೇ ಹೊಸ ಕಟ್ಟಡ ನಿರ್ಮಿಸುವಂತೆ ಒತ್ತಾಯಿಸಿದ್ದರು.
ರೇವಣ್ಣನವರ ಮಾತಿಗೆ ಸೊಪ್ಪು ಹಾಕದೆ ರಾತ್ರೋರಾತ್ರಿ ಕಟ್ಟಡ ತೆರವುಗೊಳಿಸಲಾಗಿದೆ. ಈ ಮೂಲಕ ರೇವಣ್ಣರಿಗೆ ಟಾಂಗ್ ಕೊಡಲಾಗಿದೆ. ಬೆಳಗ್ಗೆ ಕಟ್ಟಡ ತೆರವಿಗೆ ಮುಂದಾದರೆ ವಿರೋಧ ವ್ಯಕ್ತವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಎರಡು ಹಿಟಾಚಿಗಳ ಮೂಲಕ ರಾತ್ರೋರಾತ್ರಿ ತಾಲೂಕು ಕಚೇರಿ ಕಟ್ಟಡ ತೆರವು ಮಾಡಲಾಗಿದೆ. ಕಿಟಕಿ-ಬಾಗಿಲುಗಳ ಸಮೇತ ಗುತ್ತಿಗೆದಾರ ಕಟ್ಟಡ ತೆರವುಗೊಳಿಸಿದ್ದಾರೆ. ನಿನ್ನೆ ಟ್ರಕ್ ಟರ್ಮಿನಲ್ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ –ಜೆಡಿಎಸ್ ನಡುವೆ ಜಟಾಪಟಿಯೇ ನಡೆದಿತ್ತು.